ಮೊಬೈಲ್ ಅಪ್ಲಿಕೇಷನ್ ಮೂಲಕ ಆರೋಗ್ಯ ಸೇವೆ : ರಾಘವೇಂದ್ರ
ಹಾಸನ,ಜೂ.30: ಮೊಬೈಲ್ ಆಪ್ಲಿಕೇಷನ್ ಮೂಲಕ ವಿವಿಧ ಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆ ನಿಡುತ್ತಿರುವುದಾಗಿ ಐರಿಲೀಫ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮುಖ್ಯ ಕಾರ್ಯನಿರ್ಹವಣಾಧಿಕಾರಿ ರಾಘವೇಂದ್ರ ಪ್ರಸಾದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಆಧುನಿಕ ತಂತ್ರಜ್ಞಾನ ಒಳಗೊಂಡ ಆರೋಗ್ಯ ಸೇವೆಗಳನ್ನು ಮೊಬೈಲ್ ಅಪ್ಲಿಕೇಷನ್ ಮುಖಾಂತರ ಸೇವೆಯನ್ನು ಒದಗಿಸುತ್ತಿದ್ದು, ಇದರ ಸದುಪಯೋಗವನ್ನು ಹಾಸನದ ಜನತೆ ಪಡೆದುಕೊಳ್ಳಬಹುದಾಗಿದೆ. ಕೆಲಸವನ್ನು ಮಾಡುತ್ತಿದೆ ಎಂದರು. ಸಂಸ್ಥೆಯು ಆಧುನಿಕ ತಂತ್ರಜ್ಞಾನವನ್ನು ಬಳಸಿ ಸಾರ್ವಜನಿಕರಿಗೆ ಆಂಬ್ಯುಲೆನ್ಸ್ (ತುರ್ತು ವಾಹನ), ಹೋಮ್ ಕೇರ್, ರಕ್ತ ದಾಸ್ತಾನುಗಳ ನೈಜ್ಯ ಸಮಯ ವಿವರಗಳ ಸೇವೆಯನ್ನು ನೀಡಲಾಗುತ್ತಿದೆ. ಇದರಿಂದ ರಕ್ತದ ಆವಶ್ಯಕತೆ ಇರುವವರಿಗೆ ಸುಲಭವಾಗಿ ಮಾಹಿತಿ ಲಭ್ಯವಾಗಲಿದೆ, ಆಂಬ್ಯುಲೆನ್ಸ್ ಮಾಹಿತಿ ಕೂಡ ಮಾಹಿತಿ ಲಭ್ಯವಾಗಲು ಸಹಕಾರಿಯಾಗಿದೆ ಎಂದರು. ಹೀಗಾಗಿ ಹಾಸನದ ಜನತೆಗೆ ಇತರ ಸದುಪಯೋಗವನ್ನುಪಡೆದುಕೊಳ್ಳಬಹುದಾಗಿದೆ ಎಂದರು. ರಾಜ್ಯ ಸರಕಾರದ ಸಹಬಾಗಿತ್ವದಲ್ಲಿ ಇರುವ ಸಂಸ್ಥೆಯು ಸ್ಥಳೀಯ ರಕ್ತನಿಧಿ ಇತರರೊಂದಿಗೆ ಸೇವೆ ಕೊಡುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮ್ಯಾನೇಜರ್ ಕೃಷ್ಣ ಇತರರು ಇದ್ದರು.





