ಸಿರಿಯ: 5 ಲಕ್ಷಕ್ಕೂ ಅಧಿಕ ನಿರಾಶ್ರಿತರು ವಾಪಸ್

ನೇವ, ಜೂ. 30: ಈ ವರ್ಷ ಈವರೆಗೆ ಸುಮಾರು 5 ಲಕ್ಷ ಸಿರಿಯ ನಿರಾಶ್ರಿತರು ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಯುಎನ್‌ಎಚ್‌ಸಿಆರ್ ಶುಕ್ರವಾರ ಹೇಳಿದೆ.
ಅವರ ಪೈಕಿ ಸುಮಾರು 4.4 ಲಕ್ಷ ಮಂದಿ ಆಂತರಿಕವಾಗಿ ನಿರ್ವಸಿತರಾದವರು ಹಾಗೂ 31,000ಕ್ಕೂ ಅಧಿಕ ಮಂದಿ ನೆರೆಯ ದೇಶಗಳಿಗೆ ಪಲಾಯನಗೈದವರು.
ದೇಶದ ಹಲವು ಭಾಗಗಳಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಅಲೆಪ್ಪೊ, ಹಮ, ಹಾಮ್ಸ್ ಮತ್ತು ಡಮಾಸ್ಕಸ್‌ಗಳಿಗೆ ಹೆಚ್ಚಿನವರು ಹಿಂದಿರುಗಿದ್ದಾರೆ.
Next Story





