ಟಿಪ್ಪು ಅಭಿಮಾನಿಗಳಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕಾಜೂರು, ಜೂ.30: ಬೆಳ್ತಂಗಡಿ ತಾಲೂಕಿನ ಕಾಜೂರು ಹಾಗೂ ಗುರುವಾಯನಕೆರೆ ಗ್ರಾಮದ 40 ಕ್ಕೂ ಅಧಿಕ ದಲಿತ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಟಿಪ್ಪು ಅಭಿಮಾನಿಗಳು ಅಡ್ಡೂರು ಘಟಕದ ಸದಸ್ಯರು ಸಂಗ್ರಹಿಸಿದ ಹಣದಿಂದ ಉಚಿತ ನೋಟ್ ಪುಸ್ತಕ ವಿತರಣೆ ಕಾಜೂರಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಅಭಿಮಾನಿ ಬಳಗದ ಸದಸ್ಯರಾದ ಹಫೀಝ್ ಅಡ್ಡೂರು , ಇರ್ಝಾನ್ ಅಡ್ಡೂರು, ನಿಝಾಮ್ ಅಡ್ಡೂರು, ಬಾಸೀತ್ ಅಡ್ಡೂರು ಹಾಗೂ ಇಮ್ರಾನ್ ಅಡ್ಡೂರು ಮತ್ತಿತರು ಉಪಸ್ಥಿತರಿದ್ದರು.
Next Story





