ಲಾರ್ಡ್ಸ್ ಟೆಸ್ಟ್‌ಗೆ ಡು ಪ್ಲೆಸಿಸ್ ಅಲಭ್ಯ

ಕೇಪ್‌ಟೌನ್, ಜೂ.30: ದಕ್ಷಿಣ ಆಫ್ರಿಕದ ನಾಯಕ ಎಫ್‌ಡು ಪ್ಲೆಸಿಸ್ ಜು.6 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡುವುದು ಅನುಮಾನವಾಗಿದೆ.
ಜೂ.23 ರಂದು ಪ್ಲೆಸಿಸ್‌ರ ಪತ್ನಿ ಮಗುವಿಗೆ ಜನ್ಮ ನೀಡಿರುವ ಹಿನ್ನೆಲೆಯಲ್ಲಿ ಪ್ಲೆಸಿಸ್ ಇನ್ನೂ ಇಂಗ್ಲೆಂಡ್‌ಗೆ ಆಗಮಿಸಿಲ್ಲ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕ ಶುಕ್ರವಾರ ತಿಳಿಸಿದೆ.
ದಕ್ಷಿಣ ಆಫ್ರಿಕದ ಕೋಚ್ ರಸ್ಸಲ್ ಡೊಮಿಂಗೊ ಅವರ ತಾಯಿಗೆ ಕಾರು ಅಪಘಾತದಲ್ಲಿ ಗಂಭೀರ ಗಾಯವಾಗಿರುವ ಕಾರಣ ಒಂದು ವಾರದ ಹಿಂದೆಯೇ ಅವರು ಸ್ವದೇಶಕ್ಕೆ ತೆರಳಿದ್ದರು.
ದಕ್ಷಿಣ ಆಫ್ರಿಕ ತಂಡ ಪ್ರಸ್ತುತ ಇಂಗ್ಲೆಂಡ್‌ನ ಲಯನ್ಸ್ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನಾಡುತ್ತಿದ್ದು, ಡು ಪ್ಲೆಸಿಸ್ ಅನುಪಸ್ಥಿತಿಯಲ್ಲಿ ಡಿಯನ್ ಎಲ್ಗರ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ.
Next Story





