ಅವಳಿ ಮಕ್ಕಳ ತಂದೆಯಾದ ರೊನಾಲ್ಡೊ

ಮ್ಯಾಡ್ರಿಡ್, ಜೂ.30: ಪೋರ್ಚಗಲ್ ತಂಡ ಕಾನ್ಫಡರೇಶನ್ ಕಪ್‌ನ ಪ್ರಶಸ್ತಿ ಸುತ್ತಿನಿಂದ ಹೊರ ನಡೆದಿದ್ದರೂ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವೈಯಕ್ತಿಕ ಬದುಕಿನಲ್ಲಿ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ರೊನಾಲ್ಡೊ ಅವಳಿ ಗಂಡು ಶಿಶುಗಳಿಗೆ ತಂದೆಯಾಗಿದ್ದು, ಈ ಮುದ್ದು ಮಕ್ಕಳೊಂದಿಗೆ ಇರುವ ಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ.
ನನ್ನ ಜೀವನದ ಎರಡು ಪ್ರೀತಿಯ ಜೀವಗಳನ್ನು ಎತ್ತಿಕೊಂಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ರೊನಾಲ್ಡೊ ಇನ್‌ಸ್ಟಾಗ್ರಾಪ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
32ರ ಹರೆಯದ ರೊನಾಲ್ಡೊ ಅಮೆರಿಕದಲ್ಲಿ ಬಾಡಿಗೆ ತಾಯಿಯಿಂದ ಅವಳಿ ಮಕ್ಕಳನ್ನು ಪಡೆದಿದ್ದಾರೆ. ರೊನಾಲ್ಡೊ ತನ್ನ ಮೊದಲ ಪತ್ನಿಯಿಂದ ಒಂದು ಗಂಡು ಮಗುವನ್ನು ಪಡೆದಿದ್ದು, ಆ ಮಗುವಿಗೆ ಈಗ ಏಳು ವರ್ಷವಾಗಿದೆ.
ಪೋರ್ಚುಗಲ್ ತಂಡ ಕಾನ್ಫಡರೇಶನ್ ಕಪ್‌ನಲ್ಲಿ ಮೂರನೆ ಸ್ಥಾನಕ್ಕಾಗಿ ಮೆಕ್ಸಿಕೊ ತಂಡದ ವಿರುದ್ಧ ಆಡಲಿದೆ. ಇದೀಗ ಅಮೆರಿಕದಲ್ಲಿ ತನ್ನ ಅವಳಿ ಮಕ್ಕಳೊಂದಿಗೆ ಇರುವ ರೊನಾಲ್ಡೊ ಈ ಪಂದ್ಯವನ್ನು ಆಡುತ್ತಿಲ್ಲ.
Next Story





