ಜಿಎಸ್‌ಟಿ ಎಫೆಕ್ಟ್: ಸ್ಟೇಡಿಯಂನಲ್ಲಿ ಐಪಿಎಲ್ ವೀಕ್ಷಣೆ ಇನ್ನು ಮುಂದೆ ದುಬಾರಿ

ಬೆಂಗಳೂರು, ಜೂ.30: ಸ್ಟೇಡಿಯಂಗೆ ತೆರಳಿ ಕ್ರೀಡೆ ವೀಕ್ಷಿಸಲು ಬಯಸುವ ಕ್ರೀಡಾಭಿಮಾನಿಗಳ ಜೇಬಿಗೆ ಇನ್ನು ಮುಂದೆ ಕತ್ತರಿ ಬೀಳಲಿದೆ. ಜುಲೈ 1 ರಿಂದ ಜಾರಿಗೆ ಬರಲಿರುವ ಜಿಎಸ್‌ಟಿ ಪ್ರಕಾರ ಐಪಿಎಲ್‌ನಂತಹ ಕ್ರೀಡೆಗಳಿಗೆ 28 ಶೇ. ತೆರಿಗೆ ತೆರಬೇಕಾಗುತ್ತದೆ.
ಐಪಿಎಲ್‌ನಂತಹ ಕ್ಲಬ್ ಸಂಸ್ಕೃತಿಯ ಕ್ರೀಡೆಗಳಲ್ಲಿ ಮನರಂಜನೆ ಹಾಗೂ ಭಾರೀ ಬಹುಮಾನ ಮೊತ್ತಗಳ ಮಿಶ್ರಣವಿರುತ್ತದೆ. ಇಂತಹ ಕ್ರೀಡೆಗೆ 28 ಶೇ. ತೆರಿಗೆ ವಿಧಿಸಲಾಗುತ್ತದೆ.
ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳಾದ ಬಿಸಿಸಿಐ ಹಾಗೂ ಹಾಕಿ ಫೆಡರೇಶನ್‌ಗಳು ಆಯೋಜಿಸುವ ಇತರ ಟೂರ್ನಿಗಳ ಟಿಕೆಟ್‌ಗಳಿಗೆ 18 ಶೇ. ತೆರಿಗೆ ಇರಲಿದೆ. 250ಕ್ಕಿಂತ ಕಡಿಮೆ ಬೆಲೆಯ ಟಿಕೆಟ್‌ಗಳಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ.
Next Story





