ದಬಾಂಗ್-3ಗೆ ಪ್ರಭುದೇವ ನಿರ್ದೇಶಕ

ಸಲ್ಮಾನ್ ಖಾನ್ ಚಿತ್ರ ಬದುಕಿಗೆ ಹೊಸ ಬದುಕಿನಲ್ಲೇ ಹೊಸ ಮೈಲುಗಲ್ಲಾಗಿರುವ ದಬಾಂಗ್ ಬಾಕ್ಸ್‌ಆಫೀಸ್‌ನ್ನು ಚಿಂದಿ ಉಡಾಯಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆನಂತರ ತೆರೆಕಂಡ ಚಿತ್ರದ ಮುಂದುವರಿದ ಭಾಗವೂ ಭರ್ಜರಿ ಯಶಸ್ಸು ಕಂಡಿತು. ಚಿತ್ರದ ಮೊದಲ ಭಾಗವನ್ನು ಅಭಿನವ್ ಕಶ್ಯಪ್ ನಿರ್ದೇಶಿಸಿದ್ದರೆ, ಎರಡನೆ ಭಾಗವನ್ನು ಸ್ವತಃ ಚಿತ್ರದ ನಿರ್ಮಾಪಕ, ಸಲ್ಮಾನ್ ಸಹೋದರ ಅರ್ಬಾಝ್ ಖಾನ್ ನಿರ್ದೇಶಿಸಿದ್ದರು. ದಬಾಂಗ್ 3ಗೂ ಅವರೇ ಆ್ಯಕ್ಷನ್ ಕಟ್ ಹೇಳಲಿದ್ದಾರೆಂಬ ವದಂತಿಗಳೂ ಬಾಲಿವುಡ್‌ನಲ್ಲಿ ತೇಲಿಬಂದಿದ್ದವು. ಆದರೆ ಇದೀಗ ಅರ್ಬಾಝ್ ಚಿತ್ರವನ್ನು ನಿರ್ದೇಶಿಸುವುದಿಲ್ಲವಂತೆ. ಬದಲಿಗೆ ಪ್ರಭುದೇವ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಹಾಗೆ ನೋಡಿದರೆ, ಪ್ರಭುದೇವ, ಸಲ್ಮಾನ್ ಚಿತ್ರವನ್ನು ನಿರ್ದೇಶಿಸುವುದು ಇದು ಹೊಸದೇನೂ ಅಲ್ಲ. ಅವರು ಈ ಮೊದಲು ತೆಲುಗಿನ ಪೋಕಿರಿ ಚಿತ್ರದ ಹಿಂದಿ ರಿಮೇಕ್ ವಾಂಟೆಡ್‌ನ್ನು ನಿರ್ದೇಶಿಸಿದ್ದರು. ಚಿತ್ರ ಕೂಡಾ ಚೆನ್ನಾಗಿಯೇ ಓಡಿತ್ತು.
ದಬಾಂಗ್ ಚಿತ್ರದ ನಾಯಕಿ ಯಾರೆಂಬುದು ಇನ್ನೂ ನಿರ್ಧಾರವಾಗಿಲ್ಲ. ಆದಾಗ್ಯೂ ಮೊದಲ ಎರಡು ಚಿತ್ರಗಳಿಗೆ ನಾಯಕಿಯಾಗಿದ್ದ ಸೋನಾಕ್ಷಿ ಸಿನ್ಹಾ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳು ವುದಿಲ್ಲವಂತೆ.
ದಬಾಂಗ್‌ನ ಮೊದಲ ಭಾಗ 2010ರಲ್ಲಿ, ದಬಾಂಗ್ 2, 2012ರಲ್ಲಿ ಬಿಡುಗಡೆಯಾಗಿತ್ತು. ಮೊದಲ ಎರಡೂ ಭಾಗಗಳಲ್ಲಿಯೂ ಸಲ್ಮಾನ್ ಹಾಗೂ ಸೋನಾಕ್ಷಿ ಜೊತೆಗೆ ಪ್ರಕಾಶ್ ರಾಜ್, ವಿನೋದ್ ಖನ್ನಾ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದರು.
ಪ್ರಸ್ತುತ ಸಲ್ಮಾನ್, ಇತ್ತೀಚೆಗಷ್ಟೇ ಬಿಡುಗಡೆಯಾದ ಟ್ಯೂಬ್‌ಲೆಟ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಆದಾದನಂತರ ಅವರು ದಬಾಂಗ್ 3ಗೆ ಬಣ್ಣ ಹಚ್ಚಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ದಬಾಂಗ್ 3 ಮುಂದಿನ ವರ್ಷ ಬೆಳ್ಳಿತೆರೆಗೆ ಅಪ್ಪಳಿಸಲಿದೆ.







