ಶಿವರಾಜ್ ಚಿತ್ರದಲ್ಲಿ ಬಿಗ್‌ಬಿ

‘ಅಮೆರಿಕ ಅಮೆರಿಕ’, ‘ನನ್ನ ಪ್ರೀತಿಯ ಹುಡುಗಿ’, ‘ಅಮೃತಧಾರೆ’ಯಂತಹ ಸೂಪರ್‌ಹಿಟ್ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸ್ವಲ್ಪ ಸಮಯದ ಗ್ಯಾಪ್ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ವಾಪಸಾಗಿದ್ದಾರೆ. ಸದ್ಯದಲ್ಲೇ ಶಿವರಾಜ್ ಕುಮಾರ್ ನಾಯಕನಾಗಿರುವ ಚಿತ್ರವೊಂದನ್ನು ಅವರು ನಿರ್ದೇಶಿಸಲಿದ್ದಾರೆ. ಇದರ ಜೊತೆಗೆ ಕನ್ನಡ ಚಿತ್ರಪ್ರೇಮಿಗಳು ಥ್ರಿಲ್ ಆಗುವಂತಹ ಸುದ್ದಿಯೂ ಕೂಡಾ ಕೇಳಿಬಂದಿದೆ. ಇದೇ ಚಿತ್ರದಲ್ಲಿ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್ ಬಚ್ಚನ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ, ಸ್ಯಾಂಡಲ್‌ವುಡ್‌ನಲ್ಲೀಗ ಹರಿದಾಡುತ್ತಿದೆ.
ಅಮಿತಾಭ್ ಬಚ್ಚನ್ ಈ ಮೊದಲು ನಾಗತಿಹಳ್ಳಿ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಅವರದೇ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಇನ್ನು ಶಿವರಾಜ್ ಜೊತೆ ಬಿಗ್ ಬಿ ಅಭಿನಯಿಸಿರುವುದು ಇದೇ ಹೊಸದೇನಲ್ಲ. ಜ್ಯುವೆಲ್ಲರಿ ಕಂಪೆನಿಯ ಜಾಹೀರಾತೊಂದರಲ್ಲಿ ಇವರಿಬ್ಬರೂ ಜೊತೆಯಾಗಿ ನಟಿಸಿದ್ದರು.
ನಾಗತಿಹಳ್ಳಿ ನಿರ್ದೇಶನದ ಈ ಚಿತ್ರದ ಉಳಿದ ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಏನಿಲ್ಲವೆಂದರೂ, ಚಿತ್ರವು ಮುಂದಿನ ಮೂರ್ನಾಲ್ಕು ತಿಂಗಳೊಳಗೆ ಸೆಟ್ಟೇರಲಿದೆ. ಒಟ್ಟಿನಲ್ಲಿ ಈ ಇಬ್ಬರು ನಟರ ಸಮಾಗಮಕ್ಕೆ ಸ್ಯಾಂಡಲ್‌ವುಡ್ ಸಾಕ್ಷಿಯಾಗಲಿದೆಯೆಂಬ ಸುದ್ದಿಯೇ ಸಾಕಷ್ಟು ಕುತೂಹಲ ಮೂಡಿಸಿದೆ.







