ಕೆಎಸ್ಸಾರ್ಟಿಸಿಯಿಂದ ನೂತನ ಎಸಿ ಬಸ್
ಬೆಂಗಳೂರು, ಜು. 1: ಪ್ರಾಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿಯು ಜು.3 ರಿಂದ ನೂತನವಾಗಿ ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲಿ ಕರೋನ ಎಸಿ ಸ್ಲೀಪರ್ ವಾಹನ ಕಾರ್ಯಾಚರಣೆ ಮಾಡಲಾಗುತ್ತಿದೆ.
www.ksrtc.in ಪ್ರತಿದಿನ ಬೆಂಗಳೂರಿನಿಂದ ರಾತ್ರಿ 10.15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 7.45 ಕ್ಕೆ ಹೈದರಾಬಾದ್ ತಲುಪಲಿದೆ. ಅನಂತರ ರಾತ್ರಿ 9.40 ಕ್ಕೆ ಹೈದರಾಬಾದ್‌ನಿಂದ ಹೊರಟು ಬೆಳಿಗ್ಗೆ 7 ಕ್ಕೆ ಬೆಂಗಳೂರು ತಲುಪಲಿದೆ. ಪ್ರಯಾಣದರವನ್ನು 1102 ರೂ.ಗಳಷ್ಟು ನಿಗದಿ ಮಾಡಲಾಗಿದೆ. ಆಸಕ್ತರು 30 ದಿನಗಳವರೆಗಿನ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಿದ್ದು, ಇ-ಟಿಕೆಟ್‌ಗಾಗಿ ಇಲ್ಲಿ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ 080-49596666 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





