ಮೆಟ್ರೋದಲ್ಲಿ ತಾಂತ್ರಿಕ ದೋಷ
.jpg)
ಬೆಂಗಳೂರು, ಜು.1: ಬೈಯಪ್ಪನಹಳ್ಳಿ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಹೊರಟಿದ್ದ ನೇರಳೆ ಮಾರ್ಗದ ಇಡಿ 120 ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು.
ಮೈಸೂರು ರಸ್ತೆಗೆ ಹೊರಟಿದ್ದ ರೈಲಿನಲ್ಲಿ ವಿಧಾನಸೌಧದ ಡಾ.ಬಿ.ಆರ್.ಅಂಬೇಡ್ಕರ್ ನಿಲ್ದಾಣ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ನಿಲ್ದಾಣದಲ್ಲಿ ರೈಲಿನ ಎರಡು ಬಾಗಿಲುಗಳು ತೆರೆದುಕೊಳ್ಳಲಿಲ್ಲ. ಆದುದರಿಂದ ಈ ಎರಡೂ ನಿಲ್ದಾಣದಲ್ಲಿ ಇಳಿಯಬೇಕಾದ ಪ್ರಯಾಣಿಕರು ಮೆಜೆಸ್ಟಿಕ್‌ವರೆಗೂ ಪ್ರಯಾಣಿಸಬೇಕಾಯಿತು.
ಅನಂತರ ಮೆಜೆಸ್ಟಿಕ್ ನಿಲ್ದಾಣದಲ್ಲಿ ರೈಲಿನಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷವನ್ನು ತಪಾಸಣೆ ನಡೆಸಿ ದೋಷ ಸರಿಪಡಿಸಲಾಯಿತು. ಇದರಿಂದಾಗಿ ಸುಮಾರು 15 ನಿಮಿಷಗಳ ಕಾಲ ತಡವಾಗಿ ಪ್ರಯಾಣ ಮುಂದುವರಿಸಬೇಕಾಯಿತು.
Next Story





