ವಿಶ್ವಕರ್ಮದಿಂದ ಯೋಗ ದಿನಾಚರಣೆ

ಮಂಗಳೂರು, ಜು. 1: ವಿಶ್ವಯೋಗ ದಿನಾಚರಣೆಯ ಅಂಗವಾಗಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ದ.ಕ. ಚಿನ್ನದ ಕೆಲಸಗಾರರ ಸಂಘ, ವಿಶ್ವ ಬ್ರಾಹ್ಮಣ ಮಹಿಳಾ ಸುತಿ, ವಿಶ್ವಕರ್ಮ ಯುವ ಮಿಲನ್ ಹಾಗೂ ವಿಶ್ವಕರ್ಮ ಯುವ ವೇದಿಕೆ ಅವರ ಸಹಯೋಗದೊಂದಿಗೆ ‘ಯೋಗ ಮಾಹಿತಿ ಮತ್ತು ತರಬೇತಿ ಶಿಬಿರ’ ಇತ್ತೀಚೆಗೆ ಪಟ್ಟೆಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸಂಗೀತಲಕ್ಷ್ಮೀ ಮತ್ತು ಯೋಗಚಿಕಿತ್ಸಕ ಶ್ರೀಕಾಂತ್ ಎಸ್. ಅವರು ಯೋಗ ಹಾಗೂ ಯೋಗಾಸನದ ವಿವಿಧ ಆಯಾಮಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ವೇದಿಕೆಯಲ್ಲಿ ಡಾ.ಚಂದ್ರಯ್ಯಆಚಾರ್, ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ನಾಗರಾಜ ಆಚಾರ್, ದ.ಕ. ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ರಮೇಶ ಆಚಾರ್ ಮತ್ತು ಮಹಿಳಾ ಸಮಿತಿಯ ಕಾರ್ಯದರ್ಶಿ ಅರುಣಾ ಸುರೇಶ್ ಉಪಸ್ಥಿತರಿದ್ದರು.
Next Story