ಉತ್ತರಾಖಂಡ್‌ನಲ್ಲಿ ಭಿಕ್ಷೆ ನಿಷೇಧ

ಡೆಹ್ರಾಡೂನ್, ಜು.1: ಈ ದೇಶದ ಗಂಭೀರ ಸಮಸ್ಯೆಯಲ್ಲಿ ಒಂದಾಗಿರುವ ಭಿಕ್ಷೆ ನಿಷೇಧಿಸಲು 20 ಪ್ರಮುಖ ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಉತ್ತರಾಖಂಡ ಶನಿವಾರ ಕೈಜೋಡಿಸಿದೆ.
ಭಿಕ್ಷಾಟನೆಯಲ್ಲಿ ತೊಡಗುವವರನ್ನು ಬಂಧಿಸಲು 1975ರಲ್ಲಿ ಉತ್ತರಪ್ರದೇಶ ಬಿಕ್ಷುಕರ ತಡೆ ಕಾಯ್ದೆ ಜಾರಿಗೆ ತಂದಿತ್ತು. ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 274 ಮಕ್ಕಳು ಸೇರಿದಂತೆ 3,000 ಮಂದಿ ಭಿಕ್ಷೆಯಲ್ಲಿ ತೊಡಗಿದ್ದಾರೆ.
ಭಿಕ್ಷೆ ನಿಷೇದ ಅಧಿಸೂಚನೆ ಪ್ರತಿಯನ್ನು ಹಂಚಿದ ಹೆಚ್ಚುವರಿ ಕಾರ್ಯದರ್ಶಿ (ಸಾಮಾಜಿಕ ಕಲ್ಯಾಣ) ಮನೋಜ್ ಚಂದ್ರನ್, ಈ ಹಿಂದೆ ದೇವಾಲಯಗಳ ನಗರ ಹರಿದ್ವಾರಕ್ಕೆ ಮಾತ್ರ ಈ ಕಾಯ್ದೆಯನ್ನು ಅನ್ವಯಿಸಲಾಗಿತ್ತು. ಈಗ ಎಲ್ಲ ಕಡೆ ಅನ್ವಯಿಸಲಾಗುತ್ತಿದೆ ಎಂದಿದ್ದಾರೆ.
ಬೀದಿಗಳಲ್ಲಿ ಭಿಕ್ಷಾಟನೆಯಲ್ಲಲಿ ತೊಡಗಿದವರನನು ಬಂಧಿಸಲು ಪೊಲೀಸರಿಗೆ ಈ ಕಾಯ್ದೆ ಅಧಿಕಾರ ನೀಡಲಿದೆ.
Next Story





