ಆತ್ಮಹತ್ಯೆ
ಬೆಳ್ತಂಗಡಿ, ಜು.1: ಉಜಿರೆ ಗ್ರಾಮದ ಅರಳಿ ಬೈಲು ಕುಕ್ಕೆ ಶ್ರೀನಿಲಯದ ಅಶೋಕ್ ಎಂಬುವವರ ಪತ್ನಿ ಭವಾನಿ (25) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಇವರ ಮದುವೆಯಾಗಿ ಕೇವಲ ಒಂದು ವರ್ಷವಷ್ಟೇ ಕಳೆದಿದ್ದು, ಮಕ್ಕಳಾಗಲಿಲ್ಲ ಎಂಬ ಕೊರಗಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಬೆಳ್ತಂಗಡಿ ಪೋಲಿಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





