ಬ್ರಹ್ಮಶ್ರೀನಾರಾಯಣಗುರು ಸ್ವಾಮಿ ಸೇವಾ ಸಂಘಕ್ಕೆ ಆಯ್ಕೆ
ಮಂಗಳೂರು, ಜು. 1: ಕದ್ರಿ ಬ್ರಹ್ಮಶ್ರೀ ನಾರಾಯಣಗುರುಸ್ವಾು ಸೇವಾ ಸಂಘದ ಅಧ್ಯಕ್ಷರಾಗಿ ಬೋಜ ಕೆ. ಪುನರಾಯ್ಕೆಗೊಂಡರು.
ಇತ್ತೀಚೆಗೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಂಘದ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳಆಯ್ಕೆ ನಡೆಯಿತು. 2017-18 ಸಾಲಿಗೆ, ಶರ್ಮಿಳಾ ತೇಜಪಾಲ್ ಕಾರ್ಯದರ್ಶಿ, ಗೀರಿಶ್ ಕುಮಾರ್ ಕದ್ರಿ ಕೋಶಾಧಿಕಾರಿ, ಸಚಿನ್ ಕದ್ರಿ, ಜಗದೀಶ್ ಗೋಪುರಗುಂಡಿ, ಮಮತಾ ರಾಜೇಶ್ ಉಪಾಧ್ಯಕ್ಷರು, ಚೇತನ್‌ಕದ್ರಿ, ಜಯಂತಿ, ರಾಮಚಂದ್ರ ಸುವರ್ಣ ಜೊತೆ ಕಾರ್ಯದರ್ಶಿಗಳು, ಕೃಷ್ಣಪ್ಪಕದ್ರಿ, ರವೀಂದ್ರ ಗೋರಿಗುಡ್ಡೆ, ಅನಂತರಾಜ್ ಕದ್ರಿ, ಯಶೋಧ- ಹಿರಿಯ ಸಲೆಹೆಗಾರರು, ರಾಘವ ಕೆ. ಸುರೇಶ್ ಕುಮಾರ್ ಕದ್ರಿ, ನಿರಂಜನ್ ಕೆ. ಸಾಲಿಯಾನ್, ಜಯಲಕ್ಷ್ಮೀ ಬಿ. ಆರ್. ಸವಿತಾ ಜೆ. ಚರಣ್ ಕದ್ರಿ, ನಳಿನಿ, ವಿಕ್ರಾಂತ್, ಸತೀಶ್ ಪಾವೂರು ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆಗೊಂಡರು.
ಸಂಘದ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ ಬಿ. ಆರ್. ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಜಗದೀಶ್ ಗೋಪುರಗುಂಡಿ ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪುಸ್ತಕವನ್ನು ವಿತರಿಸಲಾಯಿತು.





