ಅರ್ಕಾನ್ಸಸ್ ನೈಟ್‌ಕ್ಲಬ್‌ನಲ್ಲಿ ಗುಂಡು ಹಾರಾಟ
17 ಮಂದಿಗೆ ಗಾಯ

ಲಿಟಲ್ ರಾಕ್ (ಅರ್ಕಾನ್ಸಸ್, ಅಮೆರಿಕ), ಜು. 1: ಅಮೆರಿಕದ ಅರ್ಕಾನ್ಸಸ್ ರಾಜ್ಯದ ಲಿಟಲ್ ರಾಕ್‌ನಲ್ಲಿರುವ ನೈಟ್‌ಕ್ಲಬ್ ಒಂದರಲ್ಲಿ ಶನಿವಾರ ಮುಂಜಾನೆ ಗುಂಡು ಹಾರಾಟ ನಡೆದು ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ.
ನೈಟ್‌ಕ್ಲಬ್‌ನಲ್ಲಿದ್ದ ಜನರ ನಡುವೆ ವಿವಾದ ತಲೆದೋರಿದ ಬಳಿಕ ಗುಂಡು ಹಾರಾಟ ನಡೆದಿದೆ ಎಂದು ಲಿಟಲ್ ರಾಕ್ ಪೊಲೀಸ್ ಮುಖ್ಯಸ್ಥ ಕೆಂಟನ್ ಬಕ್ನರ್ ‘ಕೆಟಿಎಚ್‌ವಿ’ ಚಾನೆಲ್‌ಗೆ ತಿಳಿಸಿದರು.
ಎಲ್ಲ 17 ಸಂತ್ರಸ್ತರು ಜೀವಂತವಾಗಿದ್ದಾರೆ ಹಾಗೂ ಈ ಹಿಂದೆ ಗಂಭೀರ ಸ್ಥಿತಿಯಲ್ಲಿ ಇದ್ದಾರೆ ಎಂದು ಹೇಳಲಾದ ಸಂತ್ರಸ್ತರೊಬ್ಬರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಟ್ವಿಟರ್ ಮೂಲಕ ಹೇಳಿದ್ದಾರೆ.
ಇದು ಭಯೋತ್ಪಾದನೆಗೆ ಸಂಬಂಧಿಸಿದ ಘಟನೆ ಎಂಬುದಾಗಿ ನಾವು ಭಾವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
Next Story





