ಮಗುವಿನ ಮಾನಭಂಗಕ್ಕೆ ಯತ್ನ: ಆರೋಪಿಗೆ ನ್ಯಾಯಾಂಗ ಬಂಧನ

ಮಂಗಳೂರು, ಜು. 1: ಪಕ್ಕದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯೊಳಗೆ ನುಗ್ಗಿ 6 ವರ್ಷದ ಮಗುವಿನ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸೂಟರ್‌ಪೇಟೆ ನಿವಾಸಿ ಸಂದೀಪ್(29) ಬಂಧಿತ ಆರೋಪಿ. ಮಗುವಿನ ತಾಯಿ ಇಲ್ಲದ ಸಂದರ್ಭದಲ್ಲಿ ಪಕ್ಕದ ಮನೆಗೆ ಹೋಗಿ ಮಾನಹಾನಿಗೆ ಯತ್ನಿಸಿ, ಪರಾರಿಯಾಗಿದ್ದ ಎಂದು ಆರೋಪಿಸಲಾಗಿತ್ತು.
ತಾಯಿ ಮರಳಿ ಮನೆಗೆ ಬಂದಾಗ ಮಗು ಅಸ್ವಸ್ಥಗೊಂಡಿತ್ತು. ಮಗುವಿನಲ್ಲಿ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ವುಹಿಳಾ ಠಾಣೆಗೆ ದೂರು ನೀಡಲಾಗಿತ್ತು.
ಪೊಲೀಸರು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿಸಿದ್ದಾರೆ.ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Next Story





