Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ನಾನು ದಲಿತನೂ ಆದೆ, ನಂತರ...

ನಾನು ದಲಿತನೂ ಆದೆ, ನಂತರ ವಿಚಾರವಾದಿಯಾದೆ!

ನರೇಂದ್ರ ನಾಯಕ್ ಜೀವನ ಕಥನ

ನಿರೂಪಣೆ : ಸತ್ಯಾ ಕೆ.ನಿರೂಪಣೆ : ಸತ್ಯಾ ಕೆ.1 July 2017 11:00 PM IST
share
ನಾನು ದಲಿತನೂ ಆದೆ, ನಂತರ ವಿಚಾರವಾದಿಯಾದೆ!

ಭಾಗ 2

ನಾನೊಬ್ಬ ದಲಿತನಾಗಿದ್ದು....!

 ಆಗಿನ ಸಮಯದಲ್ಲಿ ಸಮಾಜದಲ್ಲಿ ಬೇರೂರಿದ್ದ ಅಸ್ಪಶ್ಯತೆ ನನ್ನ ಮನಕ್ಕೆ ತುಂಬಾ ನಾಟಿತ್ತು. ಅದನ್ನು ಪ್ರಶ್ನಿಸಲು ಹೊರಟರೆ, ವಿರೋಧಿಸಲು ಹೊರಟರೆ, ನನ್ನ ಬೆಂಬಲಕ್ಕೆ ಮಾತ್ರ ಯಾರೂ ಇರುತ್ತಿರಲಿಲ್ಲ. ನಮ್ಮ ಅಜ್ಜನದ್ದು ಶ್ರೀಮಂತ ಮನೆತನ. ಶ್ರೀಮಂತಿಕೆಯ ಜತೆಗೆ ವೈದಿಕ ಆಚರಣೆಗಳು ಕೂಡಾ ನಮ್ಮ ಕುಟುಂಬದಲ್ಲಿ ಬಲವಾಗಿತ್ತು. ಇದನ್ನು ವಿರೋಧಿಸುತ್ತಲೇ ಬೆಳೆದವ ನಾನು. ನನಗೆ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನ ಆ ಕಾಲಕ್ಕೆ 100 ರೂ.ಗಳು ಸಿಗುತ್ತಿತ್ತು. ನಾನು ಮದ್ರಾಸ್‌ನಲ್ಲಿ ನನ್ನ ಪದವಿ ಶಿಕ್ಷಣವನ್ನು ನಡೆಸುತ್ತಿದ್ದೆ. ಬಳಿಕ ನನಗೆ ಮಣಿಪಾಲದ ಕೆಎಂಸಿಯಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ಸಿಕ್ಕಿತ್ತು. ಅಲ್ಲಿನ ಹಿರಿಯರೊಬ್ಬರು ನನಗೆ ನೀನು ಈ ಕೆಲಸಕ್ಕೆ ಲಾಯಕ್ಕಲ್ಲ ಎಂದಿದ್ದರು. ಆದರೆ ಪರಿಸ್ಥಿತಿಯಿಂದಾಗಿ ನಾನು ಅಲ್ಲಿ ಕೆಲಸಕ್ಕೆ ಸೇರಿದ್ದೆ. ಈ ನಡುವೆ ಸಿಂಡಿಕೇಟ್ ಬ್ಯಾಂಕ್ ಪರೀಕ್ಷೆಗೂ ಹಾಜರಾಗಿ ಆಲ್ ಇಂಡಿಯಾದಲ್ಲಿ ಮೂರನೆ ರ್ಯಾಂಕ್ ಕೂಡಾ ಪಡೆದಿದ್ದೆ. ಇದಾಗಿ ಸ್ವಲ್ಪ ಸಮಯದಲ್ಲೇ ನನಗೆ ಎಂಎಸ್ಸಿಗೆ ಕಸ್ತೂರ್‌ಬಾಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಎಂ.ಎಸ್ಸಿಯಲ್ಲಿ ಮೊದಲ ಪಾಠವೇ ಅನಾಟಮಿ. ಮೃತದೇಹಗಳನ್ನು ಕೊಯ್ದು ಅಂಗರಚನೆ ಬಗ್ಗೆ ತಿಳಿಯಬೇಕಾಗಿತ್ತು. ಅದೆಲ್ಲಾ ನನಗೆ ತೀರಾ ಹೊಸತಾಗಿತ್ತು.

ಈ ನಡುವೆ ನನಗೆ ಎದುರಾಗಿದ್ದು ದಲಿತರು. ಮೀಸಲಾತಿ ಕುರಿತಂತೆ ನನಗೂ ಅಸಮಾಧಾನವಿತ್ತು. ಮೀಸಲಾತಿ ಎಂಬುದು ಮೆರಿಟ್ ಮೇಲೆ ಸಿಗಬೇಕೆಂಬ ವಾದ ನನ್ನಲ್ಲೂ ಆ ಸಮಯದಲ್ಲಿತ್ತು. ದಲಿತರು ನಮ್ಮನ್ನು ಮೆರಿಟ್‌ನಿಂದ ವಂಚಿತರನ್ನಾಗಿಸುತ್ತಾರೆಂಬ ಅಳುಕು ನನ್ನ ಮನದಲ್ಲಿತ್ತು. ಆದರೆ ಮೆಡಿಕಲ್ ಕಾಲೇಜಿನಲ್ಲಿ ಅನಾಟಮಿ ಕಲಿಯದೆ ಮುಂದೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಅನಾಟಮಿ ಕಲಿಯಬೇಕಾದರೆ ಹೆಣ ಬೇಕು. ಆ ಹೆಣಗಳನ್ನು ಮುಟ್ಟುವುದು, ಅದಕ್ಕೆ ಸೂಜಿ ನೀಡುವುದು ಎಲ್ಲವೂ ಆ ಕಾಲದಲ್ಲಿ ದಲಿತರನ್ನು ಬಿಟ್ಟು ಬೇರಾರೂ ಮಾಡುತ್ತಿರಲಿಲ್ಲ. ಇದು ಮಾತ್ರ ನನ್ನ ಮನವನ್ನು ತೀವ್ರವಾಗಿ ಘಾಸಿಗೊಳಿಸಿತು. ನನ್ನ ಆಲೋಚನಾ ಶೈಲಿಯನ್ನೇ ಬದಲಿಸಿತು. ಆ ಸಂದರ್ಭ ಎನ್‌ಎಸ್‌ಎಸ್ ಶಿಬಿರದ ಮೂಲಕ ದಲಿತರ ಜತೆಗೆ ನಿಕಟ ಸಂಪರ್ಕ ಬೆಳೆಯಿತು. ಅವರ ಪರಿಸ್ಥಿತಿ ಅರಿಯುವಂತಾಯಿತು. ನಾನು ಅವರ ಜತೆ ಬೆರೆತು, ಅವರ ಒಡನಾಟವನ್ನು ಆರಂಭಿಸಿದೆ. ನಾನು ಒಬ್ಬ ದಲಿತನಾಗಿ ಗುರುತಿಸಿಕೊಳ್ಳಲು ಆರಂಭಿಸಿದೆ ಮತ್ತು ನಾನೂ ಒಬ್ಬ ದಲಿತನಾದೆ.

ಜ್ಯೋತಿಷ್ಯದ ಮೇಲಿನ ನಂಬಿಕೆ ಕಳಚಿದಾಗ...

ನನ್ನ ತಂದೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಭಾರೀ ನಂಬಿಕೆ. ಹಂಪನಕಟ್ಟೆಯ ಯುನಿವರ್ಸಿಟಿ ಕಾಲೇಜಿನ ಎದುರಿನ ನಮ್ಮ ತಂದೆಗೆ ಸೇರಿದ್ದ ಕಟ್ಟಡವೊಂದು ಹಣ ಕಟ್ಟದೆ ಹರಾಜಿಗೆ ಬಂದ ಸಂದರ್ಭದಲ್ಲೂ ಜ್ಯೋತಿಷಿಗಳು ಅದನ್ನು ಉಳಿಸುತ್ತಾರೆಂಬಷ್ಟು ಮಟ್ಟಿಗೆ ಪ್ರಬಲ ನಂಬಿಕೆ ಅವರದ್ದಾಗಿತ್ತು. ಅದೊಂದು ಸಲ ನಮ್ಮ ಸಂಬಂಧಿಯೊಬ್ಬರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜಾತಕದ ಕಾಪಿಯನ್ನು ಹಿಡಿದು ಅದು ನನ್ನ ಜಾತಕವೆಂದು ಹೇಳಿ ಜ್ಯೋತಿಷಿ ಬಳಿ ತೋರಿಸಿದಾಗ, ಆತ ಹೇಳಿದ ಉತ್ತರ ನಮ್ಮ ಸಂಬಂಧಿ ಮಾತ್ರವಲ್ಲ ನನಗೂ ನಗು ತರಿಸಿತ್ತು. ಆತ ಈ ಜಾತಕದವ ತನ್ನ ಹೆಂಡತಿ ಮಕ್ಕಳನ್ನು ಸರಿಯಾಗಿ ನೋಡುವುದಿಲ್ಲ’’ ಎಂದಿದ್ದ. ಆವಾಗಲೇ ಈ ಜ್ಯೋತಿಷ್ಯ ಶಾಸ್ತ್ರವನ್ನು ಹೇಳುವವರು ಕೇವಲ ಎದುರಿನ ವ್ಯಕ್ತಿಗಳನ್ನು ನೋಡಿ ಅವರ ಆಂಗಿಕ ವರ್ತನೆಯ ಮೇಲೆ ಭವಿಷ್ಯ ಹೇಳುವ ಮೂಲಕ ಎದುರಿನವರನ್ನು ಮರಳು ಮಾಡುತ್ತಾರೆಂದು ನಾನು ಅರ್ಥ ಮಾಡಿಕೊಂಡೆ. ಇದೇ ವೇಳೆ ನಾನು ಹಸ್ತರೇಖೆಯ ಬಗ್ಗೆ ಕೊಂಚ ಅಧ್ಯಯನವನ್ನೂ ನಡೆಸಿದ್ದೆ. ಹಾಗಾಗಿ ಅನಾಟಮಿ ತರಗತಿಗೆ ಬರುತ್ತಿದ್ದ ಅನಾಥ, ನಿರ್ಗತಿಕರ ಶವಗಳನ್ನು ಪರೀಕ್ಷಿಸುವ ಕಾರ್ಯ ನಡೆಸುತ್ತಿದ್ದೆ. ಹಸ್ತ ರೇಖೆಯ ಪ್ರಕಾರ ಆ ಶವಗಳು ದೊಡ್ಡ ಮನೆತನದವರಾಗಿರುತ್ತಿತ್ತು. ಆದರೆ ಅವು ಅನಾಥ, ನಿರ್ಗತಿಕ ಶವವಾಗಿ ಹೇಗೆ ಬರುತ್ತಿತ್ತು ಎಂಬ ಬಗ್ಗೆ ಯಾರಲ್ಲೂ ಉತ್ತರವಿರಲಿಲ್ಲ. ಇದು ನನ್ನ ಮನದಲ್ಲಿ ಹೆಮ್ಮರವಾಗುತ್ತಿದ್ದ ವೈಜ್ಞಾನಿಕ ಮನೋಭಾವ, ವಿಚಾರವಾದಕ್ಕೆ ಮತ್ತಷ್ಟು ಪುಷ್ಟಿಯನ್ನು ನೀಡಿತ್ತು.

1973ರ ವೇಳೆಗೆ ನಾನು ನಾಸ್ತಿಕನಾಗಿ, ವಿಚಾರವಾದಿಯಾಗಿ ಬೆಳೆಯಲಾರಂಭಿಸಿದೆ. ಸ್ವ ಮನಸ್ಕರ ಗುಂಪೂ ನಮ್ಮಿಳಗೆ ಸೃಷ್ಟಿಯಾಯಿತು. ನಾನು ವಿಚಾರವಾದಿಯಾಗಿದ್ದರೂ ನನಗೆ ವೈಜ್ಞಾನಿಕವಾಗಿ ವಿಶ್ಲೇಷಿಸಿ, ಸತ್ಯ ಎಂದು ಕಂಡಿದ್ದನ್ನು ಮಾತ್ರ ಸ್ವೀಕಾರ ಮಾಡುವ ಮನೋಭಾವ ಬೆಳೆಯಿತು.

ಎಂ.ಎಸ್ಸಿ ಪೂರ್ಣಗೊಳ್ಳುವ ಹೊತ್ತಿಗೆ ನಾನು ಪಕ್ಕಾ ನಾಸ್ತಿಕನಾಗಿದ್ದೆ...

ಎಂಎಸ್ಸಿ ಮಾಡುತ್ತಿದ್ದ ಸಂದರ್ಭ ಮಲೇಶ್ಯನ್ ಹುಡುಗನೊಬ್ಬ ನನಗೊಬ್ಬ ತೀರ್ಥಹಳ್ಳಿಯ ಜ್ಯೋತಿಷಿಯ ಪರಿಚಯವಿದೆ. ಆತ ನೀನು ರೂಂನ ಒಳಗಡೆ ಏನು ಅಡಗಿಸಿಟ್ಟರೂ ಅದನ್ನು ಹೇಳುತ್ತಾನೆ ಎಂದ. ಹಾಗಾದರೆ, ಅವನನ್ನು ಕರೆಸು, ನಾನು ಕವರೊಂದರಲ್ಲಿ ನೋಟನ್ನು ಹಾಕುತ್ತೇನೆ. ಅದರ ನಂಬರ್ ಅವ ಹೇಳುತ್ತಾನೋ ಎಂದು ಕೇಳಿದೆ. ಅದಕ್ಕೇನು ಅವ ಅದನ್ನೂ ಹೇಳುತ್ತಾನೆ. ನಾನು ಕರೆಸುತ್ತೇನೆ ಎಂದು ಹೇಳಿ ವಾರಗಟ್ಟಲೆ ಕಳೆದರೂ ಆ ಜ್ಯೋತಿಷಿ ಮಾತ್ರ ಬರಲೇ ಇಲ್ಲ. ನನ್ನಲ್ಲಿನ ವೈಜ್ಞಾನಿಕ ಮನೋಭಾವ ಸವಾಲು ಸ್ವೀಕರಿಸುವ ಹಂತಕ್ಕೆ ಬೆಳೆಯಲಾರಂಭಿಸಿತು.

ನಾನು ಎಂಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಗ ನನ್ನ ಮೇಲೆ ಅಗಾಧವಾಗಿ ಪ್ರಭಾವ ಬೀರಿದ್ದು ಟಿ.ಎಂ. ಪಟ್ಟಾಭಿರಾಮನ್. ನಾಸ್ತಿಕನಾಗಿದ್ದ ಅವರು, ನನಗೊಂದು ಮಾತು ಹೇಳಿದ್ದರು. ‘‘ನೀನು ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ನಿನ್ನ ಹಣೆಬರಹ, ನಿನ್ನ ವಂಶವಾಹಿಗೆ ಸಂಬಂಧಿಸಿರುವುದಿಲ್ಲ. ಅದು ನಿನ್ನ ಬುದ್ಧಿಮತ್ತೆ, ನಿನ್ನ ಬರವಣಿಗೆಗೆ ಸಂಬಂಧಿಸಿದ್ದು’’ ಎಂದು.

ಅದನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೆ. ಇದೇ ರೀತಿ ಎಂಎಸ್ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದಲೇ ಎದುರಿಸಿದ್ದೆ. ನಾನು ಶೇ. 79.5 ಅಂಕಗಳನ್ನು ಪಡೆದಿದ್ದು, ಅದು ಇದುವರೆಗಿನ ರೆಕಾರ್ಡ್. ಆಗ ನನ್ನ ಸ್ನೇಹಿತರೆಲ್ಲಾ ಅಚ್ಚರಿ ಪಟ್ಟಿದ್ದರು. ದೇವರನ್ನೇ ನಂಬದ ನಿನಗೆ ಇಷ್ಟೊಂದು ಅಂಕ ಹೇಗೆ ಬಂತೆಂದು. ಅದಕ್ಕೆ ನನ್ನ ತಿರುಗುತ್ತರ, ‘‘ನನ್ನ ಪರೀಕ್ಷೆ ಬರೆಯುವುದು ನಾನು. ದೇವರಲ್ಲ. ನಂಬಿಕೆ ಆಧರಿಸಿ ಮಾರ್ಕ್ ಸಿಗುವುದಿಲ್ಲ’’ ಎಂಬುದಾಗಿತ್ತು.

1976ರ ಅವಧಿಯದು. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಆ ಸಂದರ್ಭ ಸೀಮಿತವಾಗಿದ್ದ ಪತ್ರಿಕೆಗಳಲ್ಲಿ ರಾಜಕೀಯ ಸುದ್ದಿಗಳಿಗೂ ಕಡಿವಾಣ ಬಿದ್ದಿತ್ತು. ಆ ಸಂದರ್ಭ ಶ್ರೀಲಂಕಾದ ಖ್ಯಾತ ವಿಚಾರವಾದಿ ಅಬ್ರಹಾಂ ಕೋವೂರ್‌ರವರು ದೇಶದಲ್ಲಿ ಪ್ರವಾಸಕ್ಕೆ ಮುಂದಾಗಿದ್ದರು. ಅವರು ಸಾಯಿಬಾಬಾರಂತವರಿಗೆ ಚಾಲೆಂಜ್ ನೀಡಿದವರು. ಅವರನ್ನು ಮಂಗಳೂರಿಗೆ ಕರೆಸಲು ನಿರ್ಧರಿಸಲಾಯಿತು. ಆದರೆ ಸಮಾರಂಭದ ಸಂಘಟಕರು ವ್ಯಕ್ತಿಗಳಿಗೆ ಕಾರ್ಯಕ್ರಮ ನೀಡಲು ಸಾಧ್ಯವಿಲ್ಲ ನೀವು ಸಂಘಟನೆ ರಚಿಸಬೇಕೆಂದು ಹೇಳಿದಾಗ, ಸ್ವ ಮನಸ್ಕರು ಸೇರಿಕೊಂಡು ದ.ಕ. ಜಿಲ್ಲಾ ವಿಚಾರವಾದಿಗಳ ಸಂಘಟನೆ ಹುಟ್ಟು ಹಾಕಿಕೊಂಡೆವು.

ಮಂಗಳೂರಿನ ಡಾನ್ ಬಾಸ್ಕೋ ಹಾಲ್‌ನಲ್ಲಿ ಕಿಕ್ಕಿರಿದು ಸೇರಿದ ಜನರ ನಡುವೆ ನಮ್ಮ ಕಾರ್ಯಕ್ರಮ ನಡೆಯಿತು. ಹಾಲ್ ಒಳಗೆ ಮಾತ್ರವಲ್ಲ, ಕಾಂಪೌಂಡ್ ಒಳಗೂ ಜನದಟ್ಟಣೆ. ಕೊನೆಗೆ ಲೌಡ್ ಸ್ಪೀಕರ್ ಹೊರಗೆ ಹಾಕುವ ಪರಿಸ್ಥಿತಿ ನಿರ್ಮಾಣವಾಯಿತು.

ಕೊವೂರ್‌ರವರ ಒಂದೂವರೆ ಗಂಟೆ ಉಪನ್ಯಾಸ. ಬಳಿಕ ಜಾದೂಗಾರ ಸ್ವಾಮಿನಾಥನ್ ಅವರಿಂದ ಪವಾಡ ಮಾಡಿ ತೋರಿಸುವ ಕಾರ್ಯಕ್ರಮ. ಪವಾಡ ಮಾಡಿ ತೋರಿಸಿ, ಇದನ್ನು ಕೆಲವರು ಪವಾಡ ಎಂದು ಹೇಳುತ್ತಾರೆ. ಆದರೆ ನಾನು ಅದನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿ ತೋರಿಸುತ್ತೇನೆ ಎಂಬುದು ಅವರ ವಿವರಣೆ. ಸಾಯಿಬಾಬಾ ಬೂದಿ ಕೊಡುವುದು, ಕೆಂಡದ ಮೇಲೆ ನಡೆಯುವುದನ್ನು ನಾವೆಲ್ಲಾ ಕೇಳಿದ್ದೆವು. ಆದರೆ ಅದನ್ನು ಮಾಡಿ ತೋರಿಸುವುದು ನಡೆಯುತ್ತಿರಲಿಲ್ಲ. ಆದರೆ ಅವತ್ತಿನದು ಪವಾಡ ರಹಸ್ಯ ಬಯಲುಗೊಳಿಸುವ ನನ್ನ ಮೊದಲ ಸಂಪರ್ಕ. ಈ ಮೂಲಕ ನಮ್ಮ ದ.ಕ. ಜಿಲ್ಲಾ ವಿಚಾರವಾದಿ ಸಂಘ ಅಸ್ತಿತ್ವಕ್ಕೆ ಬಂತು. ಆ ಬಳಿಕ ಸಣ್ಣ ಪ್ರಮಾಣದಲ್ಲಿ ನಮ್ಮ ಚಟುವಟಿಕೆಗಳು ಆರಂಭಗೊಂಡಿತು. ನನ್ನ ಪ್ರಥಮ ಉಪನ್ಯಾಸ ಮಂಗಳ ಗಂಗೋತ್ರಿಯಲ್ಲಿ ಕನ್ನಡ ವಿಭಾಗದಲ್ಲಿ. ಡಾ. ಪಂಡಿತಾರಾಧ್ಯರವರು ಹಮ್ಮಿಕೊಂಡ ಕಾರ್ಯಕ್ರಮವದು. ಬಳಿಕ ಪವಾಡ ಬಯಲಿನ ನಮ್ಮ ಪಯಣ ಆರಂಭವಾಯಿತು.

ನನಗಾಗ 25 ವರ್ಷವಾಗಿತ್ತು.

ಮುಂದುವರಿಯುವುದು...

share
ನಿರೂಪಣೆ : ಸತ್ಯಾ ಕೆ.
ನಿರೂಪಣೆ : ಸತ್ಯಾ ಕೆ.
Next Story
X