Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಸಖ್ಯಭಾವ ಜೀವದ್ರವ್ಯವಾಗಿರುವ ‘ಸರಸ...

ಸಖ್ಯಭಾವ ಜೀವದ್ರವ್ಯವಾಗಿರುವ ‘ಸರಸ ಸಲ್ಲಾಪ’

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ1 July 2017 11:18 PM IST
share
ಸಖ್ಯಭಾವ ಜೀವದ್ರವ್ಯವಾಗಿರುವ ‘ಸರಸ ಸಲ್ಲಾಪ’

ಸರಸ ಪ್ರಬಂಧಗಳಿಗೆ ಮುದ್ದಣನ ಕಾಲದ ಇತಿಹಾಸವಿದೆ. ಮುದ್ದಣ ತನ್ನ ಗದ್ಯ ಕಾವ್ಯವನ್ನು ‘ಮನೋರಮೆ’ಯ ಜೊತೆಗಿನ ಸರಸ ಸಲ್ಲಾಪಗಳ ಜೊತೆ ಜೊತೆಗೆ ನಿರೂಪಿಸುತ್ತಾ ಹೋಗುತ್ತಾನೆ. ಅವರ ನಡುವಿನ ಸರಸ, ಹುಸಿ ಕೋಪ ಇವೆಲ್ಲವೂ ಕನ್ನಡ ಸಾಹಿತ್ಯ ಲೋಕದಲ್ಲಿ ಅಮರವಾಗಿದೆ. ಮನೋರಮೆ ಎನ್ನುವ ಕಾಲ್ಪನಿಕ ಪಾತ್ರಕ್ಕೆ ವಾಸ್ತವ ಲೋಕದಲ್ಲಿ ಶಾಶ್ವತ ಸ್ಥಾನವನ್ನು ತನ್ನ ಗದ್ಯ ಪ್ರತಿಭೆಯಿಂದ ಕೊಟ್ಟವನು ಕವಿ ಮುದ್ದಣ. ಇದಾದ ಬಳಿಕ ಹಲವು ಹಿರಿಯ ಸಾಹಿತಿಗಳು ಲಲಿತ ಪ್ರಬಂಧಗಳನ್ನು ಬರೆದಿದ್ದಾರೆ. ಎ.ಎನ್. ಮೂರ್ತಿರಾಯರಿಂದ ಕೆ. ಈಶ್ವರಪ್ಪರ ವರೆಗೆ ಇದರ ಬೇರೆ ಬೇರೆ ಪ್ರಕಾರಗಳನ್ನು ಕಾಣಬಹುದು. ಮಧ್ಯಮವರ್ಗದ ಖುಷಿ, ಸರಸ, ವಿರಸ, ಹುಸಿ ಕೋಪ, ತಲ್ಲಣಗಳನ್ನು ಕಟ್ಟಿಕೊಡುವ ದಾಂಪತ್ಯ ಸಂಭಾಷಣೆಗಳ ಮೂಲಕ ಹೊರಬಂದ ಪ್ರಬಂಧಗಳ ಸೊಗಡೇ ಬೇರೆ. ಅಂತಹ ಸಾಲಿಗೆ ನಿಲ್ಲುವಂಥಹ ಕೃತಿ ಎ. ಕೆ. ಕುಕ್ಕಿಲ ಅವರ ‘ಸರಸ ಸಲ್ಲಾಪ’. ಇಲ್ಲಿ ಸುಮಾರು 28 ಸರಸ ಸಲ್ಲಾಪಗಳಿವೆ. ಲೇಖಕರು ಮತ್ತು ಅವರ ಕಾಲ್ಪನಿಕ ತುಂಟ ಪತ್ನಿ ಸೀಮಾ ನಡುವಿನ ದೈನಂದಿನ ಸರಸ, ವಿರಸಗಳನ್ನು ಈ ಪ್ರಬಂಧಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಹಾಸ್ಯ ಲೇಖನಗಳಲ್ಲ. ಹಾಸ್ಯ ಇದರ ಉದ್ದೇಶವೂ ಅಲ್ಲ. ಅದರಾಚೆಗಿನ ಒಂದು ಲವಲವಿಕೆ ತುಂಬಿರುವ ಸಖ್ಯಭಾವವೇ ಈ ಕೃತಿಯ ಜೀವದ್ರವ್ಯ. ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಬರೆಯುವಂತೆ, ಸರಸದಿಂದ ಸರಸವಷ್ಟೇ ಹುಟ್ಟಬಹುದೆಂಬ ಆಶಯವನ್ನು ಒಂದು ತಾತ್ವಿಕತೆಯಾಗಿ ಈ ಬರಹಗಳು ಮುಖ್ಯವಾಗಿ ಮಂಡಿಸುತ್ತವೆ. ಪ್ರಬಂಧಕಾರರ ಈ ಮನೋಧರ್ಮವನ್ನು ನವೋದಯ ಕಾಲಘಟ್ಟದ ನವೋದಯಿಕ ಮನೋಧರ್ಮವೆಂದು ಕರೆಯಬಹುದು. ಛಿದ್ರಗೊಳ್ಳುತ್ತಿರುವ ಮನುಷ್ಯ ಸಂಬಂಧಗಳನ್ನು ಯಾವ ಬೆಲೆತೆತ್ತಾದರೂ ಕಾಪಾಡಿಕೊಂಡು ಬರಬೇಕೆಂಬ ಮಹತ್ವಾಕಾಂಕ್ಷೆಯನ್ನು ಈ ಸಂಕಲನದ ಪುಟ್ಟ ಪುಟ್ಟ ಪ್ರಬಂಧಗಳು ಹೊಂದಿವೆ.

ಕೌಟುಂಬಿಕ ಸಂಬಂಧದ ವೌಲ್ಯಗಳನ್ನು ಎತ್ತಿ ಹಿಡಿಯುತ್ತಲೇ, ಪತಿ-ಪತ್ನಿ ನಡುವಿನ ಸಂಬಂಧವನ್ನು ಅತ್ಯಂತ ಆತ್ಮೀಯವಾಗಿ ಕಟ್ಟಿ ಕೊಡುತ್ತದೆ. ಪತ್ನಿಯ ಜೊತೆಗಿನ ಪತಿಯ ನಡವಳಿಕೆಗಳನ್ನು, ಹೊಣೆಗಾರಿಕೆಗಳನ್ನು ಪ್ರೀತಿಯ ಚೌಕಟ್ಟಿನಲ್ಲಿಟ್ಟು ಈ ಕೃತಿ ವಿಶ್ಲೇಷಿಸುತ್ತದೆ. ಒಂದು ಕುಟುಂಬ ಉಳಿಯಬೇಕಾದರೆ ಅದರೊಳಗಿರುವ ಪ್ರೀತಿ, ಹಾಸ್ಯಗುಣ, ಲವಲವಿಕೆಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎನ್ನುವುದನ್ನು ಈ ಸರಸ ಸಲ್ಲಾಪ ನಮಗೆ ಮನವರಿಕೆ ಮಾಡಿಕೊಡುತ್ತದೆ. ಬಿಳಿಚುಕ್ಕೆ ಪ್ರಕಾಶನ ಮಂಗಳೂರು ಹೊರತಂದಿರುವ ಕೃತಿಯ ಮುಖಬೆಲೆ 125 ರೂಪಾಯಿ. ಆಸಕ್ತರು 98800 96128 ದೂರವಾಣಿಯನ್ನು ಸಂಪರ್ಕಿಸಬಹುದು. 

share
-ಕಾರುಣ್ಯಾ
-ಕಾರುಣ್ಯಾ
Next Story
X