ಜುಲೈ 10ಕ್ಕೆ ಭಾರತ ಕೋಚ್ ಆಯ್ಕೆ: ಗಂಗುಲಿ

ಕೋಲ್ಕತಾ,ಜು.1: ನೂತನ ಮುಖ್ಯ ಕೋಚ್‌ರನ್ನು ಆಯ್ಕೆ ಮಾಡಲು ಮುಂಬೈನಲ್ಲಿ ಜು.10ರಂದು ಸಂದರ್ಶನ ನಡೆಯಲಿದೆ ಎಂದು ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯ ಸೌರವ್ ಗಂಗುಲಿ ಹೇಳಿದ್ದಾರೆ.
ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಗಂಗುಲಿ ಅವರನ್ನೊಳಗೊಂಡ ಮೂವರು ಸದಸ್ಯರ ಸಿಎಸಿ ತಂಡ ನೂತನ ಕೋಚ್‌ರನ್ನು ಆಯ್ಕೆ ಮಾಡಲಿದೆ.
ಮುಂಬೈನಲ್ಲಿ ಜು.10 ರಂದು ಸಂದರ್ಶನ ನಡೆಯಲಿದೆ ಎಂದು ಲಂಡನ್‌ಗೆ ತೆರಳುವ ಮೊದಲು ಸುದ್ದಿಗಾರರಿಗೆ ಗಂಗುಲಿ ತಿಳಿಸಿದ್ದಾರೆ.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಜು.9 ಕೊನೆಯ ದಿನವಾಗಿದ್ದು, ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ ಬಳಿಕ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿತ್ತು.
ಭಾರತ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಮುಖ್ಯ ಕೋಚ್ ಹುದ್ದೆಗೆ ಮುಂಚೂಣಿಯಲ್ಲಿದ್ದು, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ಲಾಲ್‌ಚಂದ್ ರಾಜ್‌ಪೂತ್, ರಿಚರ್ಡ್ ಪೈಬಸ್ ಹಾಗೂ ದೊಡ್ಡ ಗಣೇಶ್ ಅರ್ಜಿ ಸಲ್ಲಿಸಿದ್ದಾರೆ.
Next Story





