ಸೈಮಾ ಪ್ರಶಸ್ತಿ: 'ಕಿರಿಕ್ ಪಾರ್ಟಿ'ಗೆ ಸಿಂಹಪಾಲು
# ಶಿವಣ್ಣ ಅತ್ಯುತ್ತಮ ನಟ, ಶ್ರದ್ದಾ ಶ್ರೀನಾಥ್ ಅತ್ಯುತ್ತಮ ನಟಿ

ಸಿಂಗಾಪುರದಲ್ಲಿ ಜರಗಿದ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಚಿತ್ರೋತ್ಸವ ಅದ್ದೂರಿಯಾಗಿ ನೆರವೇರಿತು. ಶುಕ್ರವಾರ ಮತ್ತು ಶನಿವಾರ ನಡೆದ ಈ ಸುಂದರ ಸಮಾರಂಭದಲ್ಲಿ ದಕ್ಷಿಣ ಭಾರತದ ಚಿತ್ರಗಳಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಆರನೇ ಆವೃತ್ತಿಯ ಈ ಚಿತ್ರೋತ್ಸವದ ಕನ್ನಡ ವಿಭಾಗದಲ್ಲಿ 'ಕಿರಿಕ್ ಪಾರ್ಟಿ' ಅತ್ಯುತ್ತಮ ಚಿತ್ರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತನ್ನಮುಡಿಗೇರಿಸಿಕೊಂಡಿತು.
ಅತ್ಯುತ್ತಮ ನಟ ಪ್ರಶಸ್ತಿ ಶಿವರಾಜ್ ಕುಮಾರ್ ಗೆ ಒಲಿದರೆ, ಅತ್ಯುತ್ತಮ ನಟಿ ಪ್ರಶಸ್ತಿಗೆ ಶ್ರದ್ಧಾ ಶ್ರೀನಾಥ್ ಪಾತ್ರರಾದರು.
ಪ್ರಶಸ್ತಿಗಳ ಪಟ್ಟಿ ಹೀಗಿದೆ.
ಅತ್ಯುತ್ತಮ ಚಿತ್ರ: ಕಿರಿಕ್ ಪಾರ್ಟಿ
ಅತ್ಯುತ್ತಮ ನಟ: ಶಿವರಾಜ್ ಕುಮಾರ್ (ಶಿವಲಿಂಗ ಚಿತ್ರ )
ಅತ್ಯುತ್ತಮ ನಟಿ: ಶ್ರದ್ಧಾ ಶ್ರೀನಾಥ್ (ಯೂ-ಟರ್ನ್)
ಅತ್ಯುತ್ತಮ ವರ್ಷದ ಎಂಟರ್‌ಟೇನರ್ ಪ್ರಶಸ್ತಿ: ರಕ್ಷಿತ್ ಶೆಟ್ಟಿ (ಕಿರಿಕ್ ಪಾರ್ಟಿ)
ಅತ್ಯುತ್ತಮ ನಿರ್ದೇಶಕ: ರಿಶಬ್ ಶೆಟ್ಟಿ (ಕಿರಿಕ್ ಪಾರ್ಟಿ)
ಅತ್ಯುತ್ತಮ ಪೋಷಕ ನಟ: ಚಂದನ್ ಆಚಾರ್ (ಕಿರಿಕ್ ಪಾರ್ಟಿ)
ಅತ್ಯುತ್ತಮ ಪೋಷಕ ನಟಿ: ರಾಧಿಕಾ ಚೇತನ್ (ಯೂ-ಟರ್ನ್)
ವಿಮರ್ಶಕರು ಮೆಚ್ಚಿದ ನಟಿ: ಪಾರುಲ್ ಯಾದವ್ (ಕಿಲ್ಲಿಂಗ್ ವೀರಪ್ಪನ್)
ಅತ್ಯುತ್ತಮ ಖಳನಟ: ವಸಿಷ್ಠ ಸಿಂಹ (ಗೋಧಿಬಣ್ಣ ಸಾಧಾರಣ ಮೈಕಟ್ಟು)
ಅತ್ಯುತ್ತಮ ಹಾಸ್ಯನಟ: ರವಿಶಂಕರ್ ಗೌಡ (ಸುಂದರಾಂಗ ಜಾಣ)
ಮೊದಲ ಪರಿಚಯ ನಟಿ : ರಶ್ಮಿಕಾ ಮಂದಣ್ಣ (ಕಿರಿಕ್ ಪಾರ್ಟಿ)
ಮೊದಲ ಪರಿಚಯ ನಟ: ನಿಖಿಲ್ (ಜಾಗ್ವಾರ್)
ಮೊದಲ ನಿರ್ದೇಶಕ: ಹೇಮಂತ್ ರಾವ್ (ಗೋಧಿಬಣ್ಣ ಸಾಧಾರಣ ಮೈಕಟ್ಟು)
ಅತ್ಯುತ್ತಮ ಸಂಗೀತ ನಿರ್ದೇಶಕ: ಅಜನೀಶ್ ಲೋಕನಾಥ್ (ಕಿರಿಕ್ ಪಾರ್ಟಿ)
ಅತ್ಯುತ್ತಮ ಹಿನ್ನೆಲೆ ಗಾಯಕ: ಅರ್ಮಾನ್ ಮಲಿಕ್ (ಮುಂಗಾರು ಮಳೆ-2)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಇಂದೂ ನಾಗರಾಜ್ (ದೊಡ್ಮನೆ ಹುಡ್ಗ)
ಅತ್ಯುತ್ತಮ ಗೀತಸಾಹಿತ್ಯ: ಧನಂಜಯ್ ರಂಜನ್ ಕಿರಿಕ್ ಪಾರ್ಟಿ)







