ಜೆಟ್ ಏರ್ ವೇಸ್ ಉಪಾಧ್ಯಕ್ಷ ಕರ್ನಲ್ ಅವನೀತ್ ಸಿಂಗ್ ಬೇಡಿ ಬಂಧನ

ಹೊಸದಿಲ್ಲಿ, ಜು.2: ಭೂಕಬಳಿಕೆ ಜೆಟ್ ಏರ್ ವೇಸ್ ಉಪಾಧ್ಯಕ್ಷ (ಭದ್ರತಾ ವಿಭಾಗ) ಕರ್ನಲ್ ಅವನೀತ್ ಸಿಂಗ್ ಬೇಡಿ ಅವರನ್ನು ಭೂಕಬಳಿಕೆ ಆರೋಪದಲ್ಲಿ ರವಿವಾರ ಬಂಧಿಸಲಾಗಿದೆ.
ಗಾಝಿಯಬಾದ್ ಮುನ್ಸಿಪಾಲ್ ಕಾರ್ಪೊರೇಶನ್ ಗೆ ಸೇರಿದ ಜಮೀನನ್ನು ಒತ್ತುವರಿ ಮಾಡಿದ ಆರೋಪದಲ್ಲಿ ಸಾಹಿಬಬಾದ್ ಪೊಲೀಸರು ಬಂಧಿಸಿದ್ದಾರೆ.
ಸುಮಾರು ನಲವತ್ತು ವರ್ಷಗಳ ಕಾಲ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದ ಕರ್ನಲ್ ಅವನೀತ್ ಸಿಂಗ್ ಬೇಡಿ 2015ರಲ್ಲಿ ಜೆಟ್ ಏರ್ ವೇಸ್ ಸೇರಿದ್ದರು. ಇದಕ್ಕೂ ಮೊದಲು ವಾಲ್ಮಾರ್ಟ್ ಇಂಡಿಯಾ ಲಿಮಿಟೆಡ್ ನಲ್ಲಿ ಉಪಾಧ್ಯಕ್ಷರಾಗಿದ್ದರು.
Next Story





