ಭಾರತ ಸೇವಾದಳ ಜಿಲ್ಲಾಧ್ಯಕ್ಷರಾಗಿ ಬಶೀರ್ ಬೈಕಂಪಾಡಿ ಆಯ್ಕೆ

ಮಂಗಳೂರು, ಜು.2: ಭಾರತ ಸೇವಾದಳ ಜಿಲ್ಲಾ ಸಮಿತಿಗೆ ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ದ.ಕ. ಭಾರತ ಸೇವಾದಳದ ಚುನಾವಣಾಧಿಕಾರಿ ಬಿ.ಕೆ. ಸಲೀಮ್‌ರ ಅಧ್ಯಕ್ಷತೆಯಲ್ಲಿ ರವಿವಾರ ಚುನಾವಣೆ ನಡೆಯಿತು.
ಭಾರತ ಸೇವಾದಳದ ಅಧ್ಯಕ್ಷರಾಗಿ ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಕಾರ್ಯದರ್ಶಿಯಾಗಿ ಟಿ.ಕೆ. ಸುಧೀರ್, ಉಪಾಧ್ಯಕ್ಷರಾಗಿ ಜಯಲಕ್ಷ್ಮಿ, ಖಜಾಂಚಿಯಾಗಿ ಲಕ್ಷ್ಮೀಶ ಶೆಟ್ಟಿ, ಕೇಂದ್ರ ಸಮಿತಿಯ ಸದಸ್ಯರಾಗಿ ವಿ.ವಿ. ಫ್ರಾನ್ಸಿಸ್ ಆಯ್ಕೆಯಾಗಿದ್ದಾರೆ.
ಎಸ್. ಪ್ರದೀಪ್ ಕುಮಾರ್ ಕಲ್ಕೂರ್, ಆಲ್ಫೋನ್ಸ್ ಫ್ರಾಂಕೋ, ಅಬ್ದುಲ್ ಜಲೀಲ್, ಸಿರಾಜ್ ಹುಸೈನ್, ಜಾನೆಟ್ ಫ್ರಾಂಕೋ, ಉಮರ್, ಪದ್ಮನಾಭ ಸಾಲ್ಯಾನ್, ಅಖಿಲ್ ಕುಮಾರ್ ಜಿಲ್ಲಾ ಸಮಿತಿಗೆ ನೂತನ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
Next Story