ಜಿಎಸ್ಟಿಯನ್ನು ಬಿಜೆಪಿ ವಿರೋಧಿಸಿತ್ತು: ಚಿದಂಬರಂ

ಚೆನ್ನೈ,ಜು.2: ಪ್ರತಿಪಕ್ಷದಲ್ಲಿದ್ದಾಗ ಬಿಜೆಪಿ ಜಿಎಸ್‌ಟಿಯನ್ನು ವಿರೋಧಿಸಿತ್ತು ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಜಿಎಸ್ಟಿ ಜಾರಿಗೆ ತರಲು ನಿರ್ಣಾಯಕ್ಕೆ ಹೆಜ್ಜೆಯನ್ನು ಯುಪಿಎ ಸರಕಾರದ ಕಾಲದಲ್ಲಿ ವಿತ್ತಸಚಿವರಾಗಿದ್ದ ಚಿದಂಬರಂ ಇರಿಸಿದ್ದರು.
ಯುಪಿಎ ಸರಕಾರ ಜಾರಿಗೆ ತರಲು ಬಯಸಿದ ರೀತಿಯಲ್ಲಿ ಈಗ ಜಿಎಸ್‌ಟಿಯನ್ನು ಜಾರಿಗೊಳಿಸಲಾಗಿಲ್ಲ. ಈಗಿನ ರೀತಿಯಲ್ಲಿ ತೆರಿಗೆ ಸಂಪ್ರದಾಯ ಜಾರಿಗೆ ತಂದರೆ ಅದು ಬೆಲೆಯೇರಿಕೆಗೆ ಕಾರಣವಾಗುತ್ತದೆ. ಸಣ್ಣ,ಮಧ್ಯಮ ವ್ಯಾಪಾರಿಗಳು ಭಾರೀ ನಷ್ಟಕ್ಕೊಳಗಾಗುವರು ಎಂದು ಚಿದಂಬರಂ ಹೇಳಿದರು.
ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್‌ನಲ್ಲಿ ಪ್ರಧಾನಿಮತ್ತು ರಾಷ್ಟ್ರಪತಿ ಸೇರಿ ಜಿಎಸ್‌ಟಿ ಘೋಷಣೆ ಮಾಡಿದ್ದರು. ಕಾಂಗ್ರೆಸ್, ಸಿಪಿಎಂ, ತೃಣಮೂಲ ಕಾಂಗ್ರೆಸ್ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.
Next Story





