ಕರ್ಣಾಟಕ ಬ್ಯಾಂಕ್ ನೂತನ ಯೋಜನೆ: "ಕೆಬಿಎಲ್-ಇಮೇಜ್ ಡಿಬಿಟ್ ಕಾರ್ಡ್" ಬಿಡುಗಡೆ

ಮಂಗಳೂರು.ಜು.2: ಖಾಸಗಿ ಬ್ಯಾಂಕ್ ರಂಗದ ಮುಂಚೂಣಿಯಲ್ಲಿರುವ ಕರ್ಣಾಟಕ ಬ್ಯಾಂಕ್ ನೂತನ ಯೋಜನೆ-ಕೆಬಿಎಲ್-ಇಮೇಜ್ ಡಿಬಿಟ್ ಕಾರ್ಡ್ ನ್ನು ಗ್ರಾಹಕರಿಗೆ ಬಿಡುಗಡೆ ಮಾಡಿದೆ.
‘‘ ಗ್ರಾಹಕರ ಸಂತೃಪ್ತಿ ಮತ್ತು ನಿರೀಕ್ಷೆಗೆ ಪೂರಕವಾಗಿ ಬ್ಯಾಂಕಿನ ಡೆಬಿಟ್ ಕಾರ್ಡ್‌ದಾರರಿಗೆ ಅವರ ಆಯ್ಕೆಯ ಇಮೇಜ್ ನೊಂದಿಗೆ ಅವರ ವೈಯಕ್ತಿಕ, ಕೌಟುಂಬಿಕ ಮತ್ತು ಸ್ನೇಹಿತರ ಚಿತ್ರಗಳನ್ನು ತಮ್ಮ ಆಯ್ಕೆಯಂತೆ ಕಾರ್ಡ್‌ಗಳಲ್ಲಿ ಮುದ್ರಿಸಿಕೊಳ್ಳಬಹುದು. ಹಾಲಿ ಕಾರ್ಡ್‌ದಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಬ್ಯಾಂಕಿನ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್ ಕಾರ್ಡ್‌ನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.
Next Story





