ಲೆಕ್ಕಪರಿಶೋಧಕರ ದಿನಾಚರಣೆ- ರಕ್ತದಾನ ಶಿಬಿರ

ಉಡುಪಿ, ಜು.2: ಅಖಿಲ ಭಾರತ ಲೆಕ್ಕಪರಿಶೋಧಕರ ಸಂಸ್ಥೆ ಉಡುಪಿ ಶಾಖೆಯ ವತಿಯಿಂದ ಲೆಕ್ಕಪರಿಶೋಧಕರ ದಿನವನ್ನು ಶನಿವಾರ ಉಡುಪಿಯಲ್ಲಿ ಆಚರಿಸಲಾಯಿತು.
ಈ ಪ್ರಯುಕ್ತ ಏರ್ಪಡಿಸಲಾದ ರಕ್ತದಾನ ಶಿಬಿರವನ್ನು ಮಣಿಪಾಲ ಕೆಎಂಸಿ ರಕ್ತನಿಧಿಯ ಮುಖ್ಯಸ್ಥೆ ಡಾ.ಶಮೀ ಶಾಸ್ತ್ರಿ ಉದ್ಘಾಟಿಸಿದರು. 25ಕ್ಕೂ ಹೆಚ್ಚು ಲೆಕ್ಕ ಪರಿಶೋಧಕರು ಹಾಗೂ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಸಂಜೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಲೆಕ್ಕಪರಿಶೋಧಕರ ಹಾಗೂ ಕುಟುಂಬದವರಿಂದ ಮನೊರಂಜನಾ ಕಾರ್ಯಕ್ರಮ ಜರಗಿತು.
ಹಿರಿಯ ಲೆಕ್ಕಪರಿಶೋಧಕರಾದ ಸಿಎ ಅನಂತನಾರಾಯಣ ಪೈ, ಸಿಎ ದೇವಾ ನಂದ ಹಾಗೂ ಸಿಎ ಶಾಂತರಾಮ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಕುಸುಮಾ ಕಾಮತ್ ಮಾತನಾಡಿದರು.
ಉಡುಪಿ ಶಾಖೆಯ ಅಧ್ಯಕ್ಷೆ ಸಿಎ ರೇಖಾ ದೇವಾನಂದ ಸ್ವಾಗತಿಸಿದರು. ಉಪಾಧ್ಯಕ್ಷ ಸಿಎ ಸುರೇಂದ್ರ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಸಿಎ ನರಸಿಂಹ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಿಎ ಪ್ರದೀಪ್ ಜೋಗಿ ಸಿಎ ಮಹೇಂದ್ರ ಶೆಣೈ, ಸಿಎ ಗಿರೀಶ್ ಪೈ ಉಪಸ್ಥಿತರಿದ್ದರು.





