ಡಿಸೇಲ್ ವಿತರಣೆಯಲ್ಲಿ 58 ಲಕ್ಷ ರೂ. ವಂಚನೆ
ಮಲ್ಪೆ, ಜು.2: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಕಾರಿ ಮೀನು ಮಾರಾಟ ಮಹಾ ಮಂಡಳಿ ನಿಯಮಿತ ಮಂಗಳೂರು ಇದರ ಮಲ್ಪೆ ಡೀಸೆಲ್ ಬಂಕ್‌ನಲ್ಲಿ ಡಿಸೇಲ್ ವಿತರಣೆಯಲ್ಲಿ 58,67,498ರೂ. ಹಣ ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜನಾದೇವಿ ಟಿ. 2014ರ ಆಗಸ್ಟ್‌ನಿಂದ 2015ರ ಮೇ ವರೆಗೆ ಪರಿಶೀಲನೆ ನಡೆಸಿದಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಕಾರಿ ಮೀನು ಮಾರಾಟ ಮಹಾ ಮಂಡಳಿಯ ಮಲ್ಪೆ ಡಿಸೇಲ್ ಬಂಕ್‌ನಲ್ಲಿ ಕರ್ತವ್ಯನಿರತ ಮೇಲ್ವಿಚಾರಕರು ಹಾಗೂ ವ್ಯವ ಸ್ಥಾಪಕ ನಿರ್ದೇಶಕರು ಬಂಕ್‌ನಿಂದ ಅಗತ್ಯ ವಸ್ತುಗಳ ಕಾಯ್ದೆಗನುಗುಣವಾಗಿ ಮೀನುಗಾರರಿಗೆ ವಿತರಿಸಬೇಕಾದಂತಹ ಡೀಸೆಲ್‌ನ್ನು ತಮ್ಮ ದುರ್ಲಾಭಕ್ಕಾಗಿ ವಿತರಣೆ ಮಾಡಿರುವುದು ಕಂಡುಬಂದಿದೆ.
Next Story





