ನಾಪತ್ತೆ
ಹಿರಿಯಡ್ಕ, ಜು.2: ಬೊಮ್ಮರಬೆಟ್ಟು ಗ್ರಾಮದ ಮುತ್ತೂರು ರೋಡ್ ನಿವಾಸಿ ಸತ್ಯಪ್ರಸಾದ್ ಆಚಾರ್ಯ(34) ಎಂಬವರು ಜೂ.26ರಂದು ಸಂಜೆ ಮನೆ ಯಿಂದ ಹೋದವರು ನಾಪತ್ತೆಯಾಗಿದ್ದಾರೆ.
ಇವರು ಜೂ.27ರಂದು ಧರ್ಮಸ್ಥಳ ಶರಾವತಿ ವಸತಿ ಗೃಹದಲ್ಲಿ ರೂಂ ಮಾಡಿ, ಮರು ದಿನ ವಸತಿಗೃಹವನ್ನು ತೆರವು ಮಾಡಿ ಹೋಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





