ಜುಗಾರಿ: 10 ಮಂದಿ ಬಂಧನ
ಕಾರ್ಕಳ, ಜು.2: ಕಾಬೆಟ್ಟು ಶೀತಲ್ ಬಾರ್ ಬಳಿ ಜು.1ರಂದು ಸಂಜೆ ವೇಳೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕುಕ್ಕುಂದೂರಿನ ಅಲ್ಪಾಸ್(22), ನೆಲ್ಲಿ ಕಾರಿನ ವಿಶ್ವನಾಥ(53), ನೆಲ್ಲಿಕಟ್ಟೆಯ ಶಶಿಕಾಂತ ಪ್ರಭು(28), ಬಜಗೋಳಿಯ ಯಶೋಧರ ದೇವಾಡಿಗ(37), ಅತ್ತೂರಿನ ಶಿವಾನಂದ ಶೆಟ್ಟಿ(45) ಎಂಬವರನ್ನು ಪೊಲೀಸರು ಬಂಧಿಸಿ, 4300ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು: ಶಿರೂರು ಗ್ರಾಮದ ಕರಿಕಟ್ಟೆಯ ಹಾಡಿಯಲ್ಲಿ ಜು.1ರಂದು ಸಂಜೆ ವೇಳೆ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಭಟ್ಕಳ ಬೆಳ್ಕೆಯ ಅಶೋಕ ನಾಯ್ಕ(25), ದಿನೇಶ್ ಎಂ.ನಾಯ್ಕ(28), ಅಶೋಕ ವೆಂಕಟಪ್ಪ ನಾಯ್ಕ (23), ಮಂಜುನಾಥ ಎಸ್ ನಾಯ್ಕ(30), ನಾಗೇಶ್ ತಿಮ್ಮಯ್ಯ ನಾಯ್ಕ (25) ಎಂಬವರನ್ನು ಪೊಲೀಸರು ಬಂಧಿಸಿ, 4800ರೂ. ನಗದು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





