ಪ್ಯಾರಿಸ್ ವಿಮಾನ ನಿಲ್ದಾಣದಿಂದ 2,000 ಜನರ ತೆರವು
ಪ್ಯಾರಿಸ್, ಜು. 2: ವ್ಯಕ್ತಿಯೋರ್ವ ಯಾವುದೇ ಭದ್ರತಾ ತಪಾಸಣೆಗೆ ಒಳಗಾಗದೆ ‘ನಿರ್ಬಂಧಿತ ಪ್ರದೇಶ’ಕ್ಕೆ ಪ್ರವೇಶಿಸಿದ ಬಳಿಕ, ಶನಿವಾರ ಪ್ಯಾರಿಸ್ನ ಪ್ರಮುಖ ವಿಮಾನ ನಿಲ್ದಾಣ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಿಂದ ಕನಿಷ್ಠ 2,000 ಮಂದಿಯನ್ನು ತೆರವುಗೊಳಿಸಲಾಯಿತು ಹಾಗೂ ಎಂಟು ವಿಮಾನಗಳನ್ನು ರದ್ದುಪಡಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಪೊಲೀಸರು ವಿಮಾನ ನಿಲ್ದಾಣವನ್ನು ಆಮೂಲಾಗ್ರವಾಗಿ ಶೋಧಿಸಿದರಾದರೂ, ಯಾವುದೇ ಸಂಶಯಾಸ್ಪದ ವಸ್ತು ಕಂಡುಬರಲಿಲ್ಲ ಎಂದು ಮೂಲವೊಂದು ತಿಳಿಸಿದೆ.
ಈ ಘಟನೆಯ ಹಿನ್ನೆಲೆಯಲ್ಲಿ 20 ವಿಮಾನಗಳು ತಡವಾಗಿ ಹಾರಿದವು.
Next Story