ಉತ್ತರಪ್ರದೇಶ: ಮಹಿಳೆಯ ಶವವನ್ನು ಸೈಕಲ್ ನಲ್ಲಿ ಸಾಗಿಸಿದ ರೈಲ್ವೆ ಪೊಲೀಸ್

ಫಿರೋಝಾಬಾದ್, ಜು.2: ಅಪಘಾತದಲ್ಲಿ ಮೃತಪಟ್ಟ ಮಹಿಳೆಯೋರ್ವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ರೈಲ್ವೆ ಪೊಲೀಸರು ಸೈಕಲ್ ನಲ್ಲಿ ಸಾಗಿಸಿದ ಘಟನೆ ಉತ್ತರಪ್ರದೇಶದ ಫಿರೋಝಾಬಾದ್ ನಲ್ಲಿ ನಡೆದಿದೆ.
ರೈಲು ಬಡಿದ ಪರಿಣಾಮ ಮೃತಪಟ್ಟಿದ್ದ ಮಹಿಳೆಯ ಶವವನ್ನು ಬಟ್ಟೆಯೊಂದರಲ್ಲಿ ಸುತ್ತಿ ಸಾಗಿಸಲಾಗಿತ್ತು. ತಲೆಯಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಸಿಬ್ಬಂದಿಯೊಬ್ಬರು, ತಾನು ಕೆಳಗಿನ ಶ್ರೇಣಿಯವನಾಗಿದ್ದು, ಆದ್ದರಿಂದ ಶವವನ್ನು ಸೈಕಲ್ ನಲ್ಲಿ ಸಾಗಿಸಿದ್ದೇನೆ ಎಂದಿದ್ದಾರೆ.
“ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಹೆಚ್ಚು ತಿಳಿದಿದೆ. ನಾನು ಕೆಳ ಶ್ರೇಣಿಯ ಪೊಲೀಸ್. ಆದ್ದರಿಂದ ಮೃತದೇಹವನ್ನು ಸೈಕಲ್ ನಲ್ಲಿ ಸಾಗಿಸಿದೆ” ಎಂದಿದ್ದಾರೆ ಎನ್ನಲಾಗಿದೆ.
Next Story





