ಜಿಎಸ್‌ಟಿ: ಜವಳಿ,ಬೀಡಿ ಉದ್ಯಮಗಳ ಕುರಿತು ಜೇಟ್ಲಿ ಜೊತೆ ಚರ್ಚಿಸಲಿರುವ ಸಚಿವ ಬಂಡಾರು

ಹೈದರಾಬಾದ್,ಜು.2: ಜಿಎಸ್‌ಟಿ ಹೇರಿಕೆ ಕುರಿತು ತೆಲಂಗಾಣದ ಜವಳಿ ವ್ಯಾಪಾರಿ ಗಳು ಮತ್ತು ಬೀಡಿ ಉದ್ಯಮಗಳು ಎತ್ತಿರುವ ವಿಷಯಗಳ ಬಗ್ಗೆ ತಾನು ವಿತ್ತಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಚರ್ಚಿಸುವುದಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಬಂಡಾರು ದತ್ತಾತ್ರೇಯ ಅವರು ರವಿವಾರ ಇಲ್ಲಿ ಸುದ್ದಿಗಾರಿಗೆ ತಿಳಿಸಿದರು.
ಜವಳಿಯ ಮೇಲೆ ಜಿಎಸ್‌ಟಿ ಹೇರಿಕೆಯನ್ನು ವಿರೋಧಿಸಿ ಸಚಿವರಿಗೆ ಅಹವಾಲು ಸಲ್ಲಿಸಿರುವ ತೆಲಂಗಾಣ ರಾಜ್ಯ ಜವಳಿ ಸಂಘಗಳ ಒಕ್ಕೂಟವು, ಜವಳಿ ಕೈಗಾರಿಕೆಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡುವಂತೆ ಕೇಂದ್ರವನ್ನು ಒತ್ತಾಯಿಸುವಂತೆ ಅವರನ್ನು ಕೋರಿದೆ.
ಜಿಎಸ್‌ಟಿಯನ್ನು ಸ್ವಾಗತಿಸಿರುವ ಗಾರ್ಮೆಂಟ್ ತಯಾರಕರ ಸಂಘವು, ಎಲ್ಲ ಸಿದ್ಧ ಉಡುಪುಗಳ ಮೇಲೆ ಶೇ.ಜಿಎಸ್‌ಟಿಯ ಏಕರೂಪ ನೀತಿಯ ಅಗತ್ಯವಿದೆ ಎಂದಿದೆ.
ಬೀಡಿ ಉದ್ಯಮವನ್ನು ಶೇ.28 ಜಿಎಸ್‌ಟಿ ವರ್ಗಕ್ಕೆ ಸೇರಿಸುವುದರ ಬಗ್ಗೆಯೂ ತಾನು ಸೋಮವಾರ ಜೇಟ್ಲಿಯವರೊಂದಿಗೆ ಚರ್ಚಿಸುವುದಾಗಿ ಬಂಡಾರು ತಿಳಿಸಿದರು.
Next Story





