ಬಂಟರ ಯಾನೆ ನಾಡವರ ಮಾತೃಸಂಘ ಮತ್ತು ಚಾಣಕ್ಯ ಐ.ಎ.ಎಸ್. ಅಕಾಡಮಿಯ ಒಡಂಬಡಿಕೆ

ಮಂಗಳೂರು, ಜು.2: ಬಂಟರ ಯಾನೆ ನಾಡವರ ಮಾತೃಸಂಘದ ಸಹಯೋಗದೊಂದಿಗೆ ದಿಲ್ಲಿಯ ‘ಚಾಣಕ್ಯ ಐಎಎಸ್ ಅಕಾಡಮಿಯು’ ಯುಪಿಎಸ್‌ಸಿ’ಯ ‘ಐಎಎಸ್, ಐಎಫ್‌ಎಸ್, ಐಆರ್‌ಎಸ್, ಮತ್ತು ಕೆಎಎಸ್’ ನ ತರಬೇತಿ ಕೇಂದ್ರವನ್ನು ಮಂಗಳೂರಿನಲ್ಲಿ ಆರಂಭಿಸಲು ಒಡಂಬಡಿಕೆ ಮಾಡಿಕೊಂಡಿದೆ.
ಮಂಗಳೂರಿನ ಶ್ರೀರಾಮಕೃಷ್ಣ ವಿದ್ಯಾಸಂಸ್ಥೆಗಳ ವಠಾರದಲ್ಲಿ ಆಗಸ್ಟ್ ನಿಂದ ಪ್ರಥಮ ಬ್ಯಾಚನ್ನು ಆರಂಭಿಸಲು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಮತ್ತು ಚಾಣಕ್ಯ ಅಕಾಡಮಿಯ ಸಿಇಒ ಯಚಿನಿತ್ ಪುಷ್ಕರ್ಣ ಒಡಂಬಡಿಕೆಗೆ ಸಹಿ ಮಾಡಿದರು.
ಈ ಸಂದರ್ಭ ಸೆನೆಗಲ್, ಬ್ರೆನ್ ಮತ್ತು ಸ್ವೀಡನ್ ಸಹಿತ ಹಲವು ದೇಶಗಳಲ್ಲಿ ರಾಯಭಾರಿಯಾಗಿದ್ದ ಬಾಲಕೃಷ್ಣ ಶೆಟ್ಟಿ ಮತ್ತು ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಜಯರಾಮ ಸಾಂತ, ಸಹ ಸಂಚಾಲಕ ಉಮೇಶ್ ರೈ, ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕ ಕೃಷ್ಣಪ್ರಸಾದ್ ರೈ ಮತ್ತಿತರರು ಉಪಸ್ಥಿತರಿದ್ದರು.
Next Story





