ಪ್ಲಿಸ್ಕೋವಾ ಮುಡಿಗೆ ಈಸ್ಟ್‌ಬರ್ನ್ ಕಿರೀಟ

ಈಸ್ಟ್‌ಬರ್ನ್, ಜು.2: ಡೆನ್ಮಾರ್ಕ್‌ನ ಕರೊಲಿನ್ ವೋಝ್ನಿಯಾಕಿ ಅವರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಝೆಕ್‌ನ ಕರೊಲಿನಾ ಪ್ಲಿಸ್ಕೋವಾ ಈಸ್ಟ್‌ಬರ್ನ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.3ನೆ ಆಟಗಾರ್ತಿ ಪ್ಲಿಸ್ಕೋವಾ ವಿಶ್ವದ ನಂ.6ನೆ ಆಟಗಾರ್ತಿ ವೋಝ್ನಿಯಾಕಿ ಅವರನ್ನು 6-4,6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಈ ಗೆಲುವಿನೊಂದಿಗೆ ಪ್ಲಿಸ್ಕೋವಾ ಸೋಮವಾರ ಆರಂಭವಾಗಲಿರುವ ವಿಂಬಲ್ಡನ್ ಟೂರ್ನಿಗೆ ಭರ್ಜರಿ ತಯಾರಿ ನಡೆಸಿದ್ದಾರೆ.
2009ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ್ದ ವೋಝ್ನಿಯಾಕಿ ಈಸ್ಟ್‌ಬರ್ನ್‌ನಲ್ಲಿ ಮತ್ತೊಂದು ಟ್ರೋಫಿ ಗೆಲ್ಲುವ ಕನಸು ಈಡೇರಲಿಲ್ಲ.
Next Story





