ವಿದ್ಯಾರ್ಥಿ ಹಿಂದೂ-ಮುಸ್ಲಿಂ ಗಲಭೆ ಬಗ್ಗೆ ಕಲಿಯಬಾರದು: ಐಸಿಎಸ್‌ಎಸ್‌ಆರ್‌ನ ನೂತನ ಮುಖ್ಯಸ್ಥ

ಹೊಸದಿಲ್ಲಿ, ಜು. 2: ಇಂದಿನ ಪಠ್ಯಪುಸ್ತಕಗಳು ಚಳುವಳಿಗಾರರನ್ನು ರೂಪಿಸುವ ಉದ್ದೇಶ ಹೊಂದಿದೆ. ಹಿಂದೂ-ಮುಸ್ಲಿಂ ಗಲಭೆ, ಜಾತಿ ಆಧಾರಿತ ವಿವಾದಗಳು ಪಠ್ಯಪುಸ್ತಗಳ ಪಠ್ಯಕ್ರಮ ಆಗಬಾರದು ಎಂದು ಐಸಿಎಸ್‌ಎಸ್‌ಆರ್‌ಗೆ ನೂತನವಾಗಿ ನೇಮಕರಾದ ಮುಖ್ಯಸ್ಥ ಬ್ರಿಜ್ ಬಿಹಾರಿ ಕುಮಾರ್ ಹೇಳಿದ್ದಾರೆ. ಸಮಾಜ ವಿಜ್ಞಾನದಲ್ಲಿ ಸಂಶೋಧನೆ ಉತ್ತೇಜಿಸುವ ಅತ್ಯುಚ್ಛ ಸಂಸ್ಥೆಯ ಅಧಿಕಾರವನ್ನು ಕಳೆದ ತಿಂಗಳ ವಹಿಸಿಕೊಂಡಿರುವ ಅವರು, ಜೆಎನ್‌ಯುನಂತಹ ವಿ.ವಿ.ಗಳು ಚಳವಳಿಗಾರರನ್ನು ಪೋಷಿಸುತ್ತಿದೆ ಎಂದಿದ್ದಾರೆ.
ದೇಶದಲ್ಲಿ ಜಾತಿ ಆಧಾರಿತ ವಾಗ್ವಾದ, ಅಸಹಿಷ್ಣುತೆ ಬಗ್ಗೆ ಜಾಗರೂಕರಾಗಿಬೇಕಾಗಿದೆ. ಇದು ಭಾರತೀಯ ಸಮಾಜದ ಪ್ರತಿಬಿಂಬ ಆಗಲಾರದು ಎಂದು ಅವರು ಹೇಳಿದರು.
ಪಠ್ಯಪುಸ್ತಕಗಳು ವಿದ್ಯಾರ್ಥಿಗಳನ್ನು ಚಳುವಳಿಗಾರರನ್ನಾಗಿ ರೂಪಿಸಲು ಇರುವುದಲ್ಲ. ಅದು ಅವರನ್ನು ಶಿಕ್ಷಿತರನ್ನಾಗಿಸಬೇಕು. ಆದರೆ, ಇಂದು ಪಠ್ಯಪುಸ್ತಕಗಳು ನಿರ್ದಿಷ್ಟ ನಿಲುವುಗಳ ಪ್ರಚಾರಕ್ಕೆ ಬಳಕೆಯಾಗುತ್ತಿದೆ. ಆದುದರಿಂದ ಪಠ್ಯಕ್ರಮವನ್ನು ಪುನಾರಚಿಸಬೇಕಾದ ಅಗತ್ಯತೆ ಇದೆ ಎಂದು ಅವರು ಹೇಳಿದರು.
Next Story





