ಪುತ್ರಿ ಶವವನ್ನು ಸೈಕಲ್ ರಿಕ್ಷಾದಲ್ಲಿ ಕೊಂಡೊಯ್ದ !

ಭುವನೇಶ್ವರ, ಜು.2: ಶವ ಸಾಗಾಟದ ವಾಹನ ದೊರೆಯದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಪುತ್ರಿಯ ಮೃತದೇಹವನ್ನು ಆಸ್ಪತ್ರೆಯಿಂದ ಸ್ಮಶಾನಕ್ಕೆ ಸೈಕಲ್ ರಿಕ್ಷಾದಲ್ಲಿ ಸಾಗಿಸಿದ ವುನಕಲಕುವ ಘಟನೆ ನಡೆದಿದೆ.
ಒರಿಸ್ಸಾದ ಪವಿತ್ರ ಕ್ಷೇತ್ರ ಪುರಿಯ ಜಗನ್ನಾಥ ದೇವಾಲಯದ ಸಾವಿರಾರು ಭಕ್ತರು ರಥೋತ್ಸವದ ಹಿನ್ನೆಲೆಯಲ್ಲಿ ಶವ ಸಾಗಾಟ ವಾಹನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಧಾನಿ ಸಾಹು ಎಂಬಾತ ತನ್ನ ಪುತ್ರಿಯನ್ನು ಸೈಕಲ್ ರಿಕ್ಷಾದಲ್ಲಿ ಸಾಗಾಟ ಮಾಡಿದ್ದಾರೆ.
ಒರಿಸ್ಸಾ ಸರಕಾರ ಬಡ ಜನರಿಗೆ ಉಚಿತವಾಗಿ ಶವ ಸಾಗಾಟ ವಾಹನ ನೀಡುತ್ತದೆ. ಆದರೆ, ದಾನಿ ಸಾಹು ಶವ ಸಾಗಾಟ ವಾಹನ ನೀಡುವಂತೆ ವಿನಂತಿಸಿಲ್ಲ. ಆದುದರಿಂದ ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಜಿಲಾ್ಲ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪುರಿಯಲ್ಲಿ 9 ದಿನಗಳ ರಥಯಾತ್ರೆ ನಡೆಯುವ ಹಿನ್ನೆಲೆಯಲ್ಲಿ ಗ್ರಾಂಡ್ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಆದರೆ, ಇವರ ನಡುವೆಯೇ ಸಾಹು ತನ್ನ ಪುತ್ರಿ ಕಬಿಯ ಮೃತದೇಹವನ್ನು ಸೈಕಲ್ ರಿಕ್ಷಾದಲ್ಲಿ ಇರಿಸಿ ಸಾಗಿಸಿದ್ದಾನೆ. ಆದರೆ ಮೃತದೇಹವನ್ನು ಸ್ವರ್ಗದ್ವಾರ್ ಸ್ಮಶಾನಕ್ಕೆ ಕೊಂಡೊಯ್ಯುವಲ್ಲಿ ಸಾಹುಗೆ ಅಲ್ಲಿದ್ದ ಪೊಲೀಸರಾಗಲಿ, ಭಕ್ತರಾಗಲಿ ಸಹಕರಿಸಲಿಲ್ಲ.
ಎದೆ ನೋವಿನ ಕಾರಣದಿಂದ ಪುತ್ರಿಯನ್ನು ನಿನ್ನೆ ಸಾಹು ಇದೇ ಸೈಕಲ್ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಸರಕಾರದ 108 ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಆಮಿಸಲಿಲ್ಲ ಎಂದು ಸಾಹು ಹೇಳಿದ್ದಾರೆ.







