ಬೈರಿಕಟ್ಟೆ : ನುಹಾ ಖದೀಜಗೆ ಸನ್ಮಾನ

ವಿಟ್ಲ,ಜು.2: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 5ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ದ.ಕ.ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕನ್ಯಾನ ಗ್ರಾಮದ ಬೈರಿಕಟ್ಟೆ ಮುನವ್ವಿರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿನಿ ನುಹಾ ಖದೀಜ ಅವರಿಗೆ ಸನ್ಮಾನ ಕಾರ್ಯಕ್ರಮ ಬೈರಿಕಟ್ಟೆ ಜಮಾಅತ್ ವತಿಯಿಂದ ನಡೆಯಿತು.
ಬೈರಿಕಟ್ಟೆ ಮದ್ರಸಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿನ್ನದ ನಾಣ್ಯ, ಚಿನ್ನದ ಆಭರಣ ಹಾಗೂ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ರೇಂಜ್ ಮುಫತ್ತಿಶ್ ಮಹಮ್ಮದ್ ಹನೀಫ್ ಮುಸ್ಲಿಯಾರ್ ಸಮಾರಂಭವನ್ನು ಉದ್ಘಾಟಿಸಿದರು. ಬೈರಿಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಬಿ.ಕೆ.ಅಬೂಬಕರ್ ಹಾಜಿ ಅಧ್ಯಕ್ಷತೆ ವಹಿಸಿದರು. ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ವಿಟ್ಲ ರೇಂಜ್ ಅಧ್ಯಕ್ಷ ಅಬ್ಬಾಸ್ ದಾರಿಮಿ ಕೆಲಿಂಜ ಮುಖ್ಯ ಭಾಷಣ ಮಾಡಿದರು.
ಮದ್ರಸ ಮುಖ್ಯ ಶಿಕ್ಷಕ ಬಿ.ಕೆ.ಸಲೀಂ ಮದನಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಜುಮಾ ಮಸೀದಿ ಪೂರ್ವಾಧ್ಯಕ್ಷರುಗಳಾದ ಪೊಡಿಯಬ್ಬ ಹಾಜಿ ಸೇರಾಜೆ, ಬಿ.ಎಚ್. ಮೊಯ್ದಿನ್ ಹೊಸಮನೆ, ಖಲೀಲ್ ಇಸ್ಮಾಯಿಲ್ ಹಾಜಿ, ಕನ್ಯಾನ ಗ್ರಾ.ಪಂ. ಸದಸ್ಯ ಪಿ.ಬಿ. ಮೊಯ್ದಿನ್ ಹಾಜಿ, ಡಿ. ಹಮೀದ್, ಹಮೀದ್ ಬಾಖವಿ, ಅಬ್ದುಲ್ಲ ಕುಂಞಿ ಹಾಜಿ, ಡಿ.ಬಿ. ಉಮರ್ ಸಅದಿ, ಇಸಾಕ್ ಸಅದಿ, ಯೂಸುಫ್ ಹಾಜಿ ಕಾಡುಮನೆ, ಮೊಯ್ದು ಹಾಜಿ ಗೂಣಾಜೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿ.ಕೆ. ಸಲೀಂ ಮದನಿ ಸ್ವಾಗತಿಸಿದರು. ಝಿಯಾದ್ ಬೈರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಮಸೀದಿ ಕಾರ್ಯದರ್ಶಿ ಬಿ.ಕೆ. ಅಬ್ದುಲ್ಲ ಕುಂಞಿ ಹಾಜಿ ವಂದಿಸಿದರು. ಅಭಿನಂದನೆ ಸ್ವೀಕರಿಸಿದ ವಿದ್ಯಾರ್ಥಿನಿ ನುಹಾ ಖದೀಜ ಅವರು ಬೈರಿಕಟ್ಟೆಯ ಕಾಡುಮನೆ ನಿವಾಸಿ ಅಬ್ದುಲ್ ಸಲೀಂ ಮತ್ತು ಸುಮಯ್ಯಾ ದಂಪತಿಯ ಪುತ್ರಿ. ಇದೇ ವೇದಿಕೆಯಲ್ಲಿ ವಿವಿಧ ಸಂಘಟಕರು ಹಾಗೂ ವಿದ್ಯಾರ್ಥಿನಿಯ ಕುಟುಂಬಿಕರು ನುಹಾ ಖದೀಜ ಅವರಿಗೆ ಚಿನ್ನಾಭರಣ, ಚಿನ್ನದ ಪದಕ, ಪ್ರೋತ್ಸಾಹ ಧನ ಹಾಗೂ ಇನ್ನಿತರ ಕೊಡುಗೆಗಳನ್ನು ನೀಡಿ ಅಭಿನಂದಿಸಿದರು.







