Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ3 July 2017 12:06 AM IST
share
ಓ ಮೆಣಸೇ...

 ಹಿಂದಿಯಿಲ್ಲದೆ ದೇಶದ ಪ್ರಗತಿ ಸಾಧ್ಯವಿಲ್ಲ - ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

 ಹಿಂದಿ ಮಾತನಾಡದ ಅದೆಷ್ಟೋ ರಾಜ್ಯಗಳು ಹಿಂದಿ ಮಾತನಾಡುವ ರಾಜ್ಯಗಳಿಗಿಂತ ಮುಂದಿವೆಯಲ್ಲ?

---------------------

ರಾಜಕೀಯಕ್ಕೆ ರಜನಿ ಅನರ್ಹ -ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ

ಅಸಾಧ್ಯವಾದ ದೃಶ್ಯಗಳಿಗೆ ಡ್ಯೂಪ್‌ಗಳನ್ನು ಬಳಸಿದರಾಯಿತು.

---------------------
ಮುಖ್ಯಮಂತ್ರಿ ಸಿದ್ದರಾಮಯ್ಯ ಕೀಚಕ ಇದ್ದಂತೆ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ನಿಮ್ಮ ಸೀರೆ ಎಳೆದದ್ದು ಯಾವಾಗ?

---------------------
ತಮ್ಮ ಪುತ್ರನನ್ನು ಚುನಾವಣೆಗೆ ನಿಲ್ಲಿಸಲು ಹೊರಟಿರುವ ಸಿಎಂ ನಮ್ಮ ಪಕ್ಷವನ್ನು ಅಪ್ಪ-ಮಕ್ಕಳ ಪಕ್ಷ ಎನ್ನುತ್ತಿದ್ದಾರೆ -ಎಚ್.ಡಿ. ಕುಮಾರ ಸ್ವಾಮಿ, ಜೆಡಿಎಸ್ ಅಧ್ಯಕ್ಷ

ನಿಮ್ಮದೀಗ ಅಪ್ಪ, ಮಕ್ಕಳು, ಮೊಮ್ಮಕ್ಕಳ ಪಕ್ಷವಲ್ಲವೇ?

---------------------

ರಾಜ್ಯದಲ್ಲಿ ಅಧಿಕಾರಿಗಳಿಗೆ ಸ್ವಾತಂತ್ರ ಇಲ್ಲ - ದೇವೇಗೌಡ, ಮಾಜಿ ಪ್ರಧಾನಿ

ಜನಸಾಮಾನ್ಯರ ಸ್ವಾತಂತ್ರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?

---------------------
ಪ್ರಜಾಪ್ರಭುತ್ವ ನಮ್ಮ ನಿಜವಾದ ಸಂಸ್ಕೃತಿ - ನರೇಂದ್ರ ಮೋದಿ, ಪ್ರಧಾನಿ

ಅಂದರೆ ಹಿಂದುತ್ವವಾದಿಗಳದ್ದು ನಕಲಿ ಸಂಸ್ಕೃತಿ ಎಂದಂತಾಯಿತು.

---------------------
ನರೇಂದ್ರ ಮೋದಿ ನನ್ನ ನಿಜವಾದ ಮಿತ್ರ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಕೊಳೆತ ಕುಂಬಳಕಾಯಿಗೆ, ಕೆಟ್ಟು ಹೋದ ತೆಂಗಿನಕಾಯಿ.

---------------------
ಬಿಜೆಪಿಯೊಳಗೆ ಶೋಭಾ ಕರಂದ್ಲಾಜೆಯೊಬ್ಬರೇ ಗಂಡು - ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಮುಖಂಡ.

ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದರಂತೆ ಯಡಿಯೂರಪ್ಪ.

---------------------

ಹಿಂದಿನ ಸರಕಾರವಿದ್ದಾಗಲೇ ಹೆಚ್ಚು ಗುಂಪು ಹತ್ಯೆಗಳು ನಡೆದಿರುವುದು - ಅಮಿತ್ ಶಾ, ಬಿಜೆಪಿ ಮುಖಂಡ

ಅವರ ದಾಖಲೆಯನ್ನು ಮುರಿಯುವುದಕ್ಕೆ ಹೊರಟಿದ್ದೀರಿ ಎಂದಾಯಿತು.

---------------------
ಪೇಜಾವರ ಶ್ರೀಯವರ ಉದ್ದೇಶ ಅರಿಯಬೇಕಾಗಿದೆ - ಚಕ್ರವರ್ತಿ ಸೂಲಿಬೆಲೆ

ದುರುದ್ದೇಶವಿದ್ದರೆ ಮಾತ್ರ ಸಮಾಧಾನವೆಂದು ಕಾಣುತ್ತದೆ.

---------------------
ಭಯೋತ್ಪಾದನೆ ನಿರ್ಮೂಲನೆಯೇ ಗುರಿ - ನರೇಂದ್ರ ಮೋದಿ, ಪ್ರಧಾನಿ

ಅದರ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಿದರೆ ತನ್ನಷ್ಟಕ್ಕೆ ನಿರ್ಮೂಲನೆಯಾಗುತ್ತದೆ.

---------------------
ಮತೀಯವಾದಿಗಳಿಗೆ ನಾನೇ ಟಾರ್ಗೆಟ್ - ರಮಾನಾಥ ರೈ, ಅರಣ್ಯ ಸಚಿವ

ಆದರೆ ಚೂರಿ ಮಾತ್ರ ಅಮಾಯಕರ ಹೊಟ್ಟೆಯನ್ನೇ ಇರಿಯುತ್ತದೆ.

---------------------
ಗೋಮಾಂಸ ತಿಂದದ್ದು ನಾಚಿಕೆಗೇಡು - ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಮುಖ್ಯಮಂತ್ರಿಯಾಗಿದ್ದಾಗ ನೀವು ಏನೇನು ತಿಂದಿದ್ದೀರಿ ಎನ್ನುವುದನ್ನೊಮ್ಮೆ ನೆನಪು ಮಾಡಿಕೊಳ್ಳಿ.

---------------------
ಅಟೆಂಡರ್ ಕೆಲಸ ಕೊಟ್ಟರೂ ಮಾಡುತ್ತೇನೆ -ಕೆ.ಪಿ. ನಂಜುಂಡಿ

ಅದೆಲ್ಲ ನೀವು ಕೊಡುವ ಸೂಟ್‌ಕೇಸ್‌ನ್ನು ಆಧರಿಸಿ ನಿಂತಿದೆ.

---------------------
ಸಿದ್ದರಾಮಯ್ಯ ಸೊಂಟಕ್ಕೆ ನಾನೇ ತಾಯತ ಕಟ್ಟಿದ್ದೆ - ಎಚ್.ವಿಶ್ವನಾಥ್

ಅದನ್ನು ಬಿಚ್ಚಿದ್ದಾರೆ ಎಂಬ ಸಿಟ್ಟಿನಿಂದ ಕಾಂಗ್ರೆಸ್ ತೊರೆದಿರಾ?

---------------------
ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವವರಿಗೆ ಭಗವಂತ ತಕ್ಕ ಉತ್ತರ ನೀಡುತ್ತಾನೆ - ಎಚ್.ಡಿ. ಕುಮಾರಸ್ವಾಮಿ

ಅಂದರೆ ಭಗವಂತನ ಪಕ್ಷ ಜೆಡಿಎಸ್ ಅಂತೀರಾ?

---------------------
ಸಿಎಂ ಆಗುವ ಬಯಕೆ ಇಲ್ಲ - ಬಿ.ಎಸ್.ಯಡಿಯೂರಪ್ಪ

ಶ್ರೀಸಾಮಾನ್ಯರಿಗೂ ಕೂಡ ನಿಮ್ಮನ್ನು ಸಿಎಂ ಮಾಡುವ ಬಯಕೆ ಇದ್ದಂತಿಲ್ಲ.

---------------------
ಕೃಷ್ಣ ಮಠದಲ್ಲಿ ಇಫ್ತಾರ್ ಹಿಂದೂ ಸಮಾಜಕ್ಕೆ ಅವಮಾನ - ಪ್ರಮೋದ್ ಮುತಾಲಿಕ್, ಶ್ರೀ ರಾಮ ಸೇನೆ ಸಂಸ್ಥಾಪಕ

ಹಿಂದೂ ಸಮಾಜಕ್ಕೆ ಅವಮಾನವಾಗಲು ನೀವೊಬ್ಬರು ಸಾಕು.

---------------------
ದಲಿತರು ಅವರ ಮನೆಗಳಲ್ಲಿ ನಾಯಿ, ನರಿ ತಿನ್ನಲಿ - ಪ್ರತಾಪ್ ಸಿಂಹ, ಬಿಜೆಪಿ ಸಂಸದ

ನಿಮಗೆ ಅದು ಇಷ್ಟವೆಂದರೆ ಅದನ್ನೇ ತಿನ್ನಿ. ದಲಿತರು, ಅವರಿಗಿಷ್ಟವಾದುದು ತಿನ್ನಲಿ.

---------------------
ಸಿದ್ದರಾಮಯ್ಯರನ್ನು ಬೆಳೆಸಿದ್ದು ಜೆಡಿಎಸ್ ಪಕ್ಷ - ಎಚ್.ಡಿ. ದೇವೇಗೌಡ

 ಬೆಳೆಸಿದವರನ್ನು ಚಿವುಟಿದ್ದೂ ಜೆಡಿಎಸ್ ಪಕ್ಷವೇ ತಾನೆ.

---------------------

ಅಭಿವೃದ್ಧಿಯಲ್ಲಿ ರಾಜಕೀಯ ಇಲ್ಲ - ನಳಿನ್ ಕುಮಾರ್ ಕಟೀಲ್, ಸಂಸದ

ಅಭಿವೃದ್ಧಿಗೆ ಬೆಂಕಿ ಹಚ್ಚುವುದರಲ್ಲಷ್ಟೇ ರಾಜಕೀಯವೇ?
 

share
ಪಿ.ಎ.ರೈ
ಪಿ.ಎ.ರೈ
Next Story
X