ಭಾರತದ ಕೋಚ್ ಹುದ್ದೆಗೆ ಫಿಲ್ ಸಿಮೊನ್ಸ್ ಅರ್ಜಿ ಸಲ್ಲಿಕೆ

ಹೊಸದಿಲ್ಲಿ, ಜು.3: ಭಾರತದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರ ಪಟ್ಟಿ ದಿನೇ ದಿನೇ ಬೆಳೆಯುತ್ತಿದ್ದು, ವೆಸ್ಟ್‌ಇಂಡೀಸ್‌ನ ಮಾಜಿ ಆರಂಭಿಕ ಆಟಗಾರ ಫಿಲ್ ಸಿಮೊನ್ಸ್ ಅರ್ಜಿ ಸಲ್ಲಿಸಿರುವ ಹೊಸ ಅಭ್ಯರ್ಥಿಯಾಗಿದ್ದಾರೆ. ದಕ್ಷಿಣ ಆಫ್ರಿಕದ ದಂತಕತೆಯೊಬ್ಬರು ಅರ್ಜಿ ಸಲ್ಲಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.
54ರ ಪ್ರಾಯದ ಸಿಮೊನ್ಸ್‌ಗೆ ಕೋಚಿಂಗ್ ನೀಡಿರುವ ಅಪಾರ ಅನುಭವವಿದ್ದು, ವೆಸ್ಟ್‌ಇಂಡೀಸ್ ತಂಡಕ್ಕೆ ಎರಡು ಬಾರಿ ಕೋಚ್ ಆಗಿ ಆಯ್ಕೆಯಾಗಿದ್ದರು. ಸಿಮೊನ್ಸ್ ಮಾರ್ಗದರ್ಶನದಲ್ಲಿ ವಿಂಡೀಸ್ ತಂಡ ಟ್ವೆಂಟಿ-20 ವಿಶ್ವಕಪ್‌ನ್ನು ಜಯಿಸಿತ್ತು.
ಭಾರತ ತಂಡದ ಕೋಚ್ ಆಗಲು ಅಧಿಕೃತವಾಗಿ ಆಸಕ್ತಿ ವ್ಯಕ್ತಪಡಿಸಿರುವ ಸಿಮೊನ್ಸ್ ಇತ್ತೀಚೆಗೆ ಅರ್ಜಿಯನ್ನು ಕಳುಹಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
Next Story





