Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನನ್ನನ್ನು ತಂದೆಯನ್ನಾಗಿ ಪಡೆದ ತಾನು...

ನನ್ನನ್ನು ತಂದೆಯನ್ನಾಗಿ ಪಡೆದ ತಾನು ಅದೃಷ್ಟವಂತೆ ಎಂದು ಮಗಳಂತಹ ಸೊಸೆ ಹೇಳಿದ್ದಳು: ಹಾರುನ್

ನನ್ನ ಕತೆ

ಜಿಎಂಬಿ ಆಕಾಶ್ಜಿಎಂಬಿ ಆಕಾಶ್3 July 2017 4:14 PM IST
share
ನನ್ನನ್ನು ತಂದೆಯನ್ನಾಗಿ ಪಡೆದ ತಾನು ಅದೃಷ್ಟವಂತೆ ಎಂದು ಮಗಳಂತಹ ಸೊಸೆ ಹೇಳಿದ್ದಳು: ಹಾರುನ್

ಸಿರಿನ್ ಗೆ 13 ವರ್ಷವಾಗಿತ್ತು. ಅನಾಥೆಯಾಗಿದ್ದ ಆಕೆಯನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ನಾನು ಆಕೆಯನ್ನು ನನ್ನ ಸೊಸೆಯಾಗಿ ತರಲು ನಿರ್ಧರಿಸಿದೆ. ಆಕೆ ನನ್ನನ್ನು ಅಬ್ಬಾ ಎಂದು ಕರೆದಾಗಲೆಲ್ಲಾ ನನ್ನ ಹೃದಯ ಪ್ರೀತಿಯಿಂದ ಮಂಜಿನಂತೆ ಕರಗುತ್ತಿತ್ತು. ನನಗೆ ಮಗಳಿರಲಿಲ್ಲ ಆದುದರಿಂದ ಬಹಳ ಬೇಗನೇ ಸಿರಿನ್ ನಮ್ಮ ಒಬ್ಬಳೇ ಮಗಳಾಗಿ ಬಿಟ್ಟಳು. ನನ್ನ ಪತ್ನಿ ಪಾರುಲ್ ಗೆ ಮಾನಸಿಕ ಸಮಸ್ಯೆಯಿದೆ. ಆಕೆ ಆರು ತಿಂಗಳು ಹಾಸಿಗೆಯಲ್ಲಿಯೇ ಕಳೆದಿದ್ದಳು.

ಆ ಸಮಯ ನನ್ನ ಸೊಸೆ ಆಕೆಯನ್ನು ಒಬ್ಬಳು ಮಗಳು ತಾಯಿಯ ಆರೈಕೆ ಮಾಡುವುದಕ್ಕಿಂತ ಹೆಚ್ಚು ಆರೈಕೆ ಮಾಡಿದ್ದಳು.

ಸಿರಿನ್ ಯಾವತ್ತೂ ಚಟುವಟಿಕೆಯಿಂದಿರುತ್ತಿದ್ದಳು. ಆದರೆ ಕೆಲವೊಮ್ಮೆ ಆಕೆ ಬಹಳ ದುಃಖಿತಳಾಗುತ್ತಿದ್ದಳು. ಒಂದು ದಿನ ನಾನು ನನ್ನ ಬೋಟಿನಲ್ಲಿ ನಗರಕ್ಕೆ ಬರುತ್ತಿದ್ದಾಗ ಆಕೆ ಏನನ್ನೋ ಹೇಳಲು ನನ್ನ ಬಳಿ ಓಡಿ ಬಂದಳು. ನಾನು ಆಕೆಗೆ ನನ್ನ ಮಗನಿಗೆ ತಿಳಿಯದಂತೆ ತ್ವಚೆಯ ಕ್ರೀಮ್ ಖರೀದಿಸಿಕೊಡಬೇಕೆಂದು ಆಕೆ ನಾಚುತ್ತಾ ಹೇಳಿದಳು.

ಇಂತಹ ವಸ್ತುವನ್ನು ನಾನು ಇಲ್ಲಿಯ ತನಕ ಖರೀದಿಸದೇ ಇದ್ದರೂ ಆ ದಿನ ಬಹಳ ಸಂತೋಷದಿಂದ ಆಕೆಗೋಸ್ಕರ ಆ ಕ್ರೀಮ್ ಖರೀದಿಸಿದೆ. ಆಕೆ ಕುರೂಪಿಯೆಂದು ನನ್ನ ಮಗ ಆಕೆಯನ್ನು ಅವಮಾನಿಸುತ್ತಿದ್ದನೆಂದು ಸ್ವಲ್ಪ ದಿನಗಳ ನಂತರ ನನಗೆ ತಿಳಿದು ಬಂದಿತ್ತು. ನನ್ನ ಮಗ ಆತನ ಪತ್ನಿಯ ಮೇಲೆ ಇಷ್ಟೊಂದು ದ್ವೇಷ ಹೊಂದಿದ್ದಾನೆಂದು ನನಗೆ ತಿಳಿದಿರಲಿಲ್ಲ. ಅವರ ಸಮಸ್ಯೆ ಪರಿಹರಿಸಲು ನನಗೆ ಮನಸ್ಸಿತ್ತಾದರೂ ಅವರ ವಿವಾಹದಲ್ಲಿ ಬಿರುಕು ಬೀಳುತ್ತಿತ್ತು. ನನ್ನ ಮಗ ಹಲವಾರು ರಾತ್ರಿ ಮನೆಗೆ ಬರುವುದನ್ನೇ ನಿಲ್ಲಿಸಿ ಬಿಟ್ಟ.

ನನ್ನ ಸೊಸೆಯ ಹೆರಿಗೆ ಸಮಯ ನನ್ನ ಪತ್ನಿಗೆ ಗಾಬರಿಯಾಗಿತ್ತು. ಸಿರಿನ್ ಯಾವ ಕ್ಷಣದಲ್ಲಾದರೂ ಸಾಯಬಹುದೆಂದು ಆಕೆ ಹೇಳುತ್ತಿದ್ದಳು. ನನ್ನ ಹುಚ್ಚು ಪತ್ನಿಯನ್ನು ನಂಬದ ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಲೇ ಇದ್ದೆ. ಸಿರಿನ್ ತನ್ನ ಆರೋಗ್ಯ ಸ್ಥಿತಿಯನ್ನು ನನ್ನಿಂದ ಬಚ್ಚಿಟ್ಟಿದ್ದಳು.

ಆ ದಿನ ನನ್ನ ಬಳಿ ಹಣವಿರಲಿಲ್ಲ. ನನ್ನ ಮೊಮ್ಮಗಳು ಹುಟ್ಟಿದ ಸಂದರ್ಭ ಅದರ ತಾಯಿ ಸಾವಿನೊಂದಿಗೆ ಹೋರಾಡುತ್ತಿದ್ದಳು. ನಾನು ಹೇಗಾದರೂ ಹಣ ಹೊಂದಿಸಿ ನನ್ನ ಬೋಟ್ ತಯಾರುಗೊಳಿಸಿದೆ. ಆಕೆಯನ್ನು ಹೊರ ತರಲು ಯತ್ನಿಸಿದಾಗ ಸಿರಿನ್ ನನ್ನನ್ನು ತಡೆದಳು. ನನ್ನ ಕೈ ಹಿಡಿದು ನನ್ನನ್ನು ತನ್ನ ತಂದೆಯನ್ನಾಗಿ ಪಡೆಯಲು ಆಕೆ ಅದೃಷ್ಟವಂತೆ ಎಂದು ಹೇಳಿದಳು. ಆಕೆ ಅಳುತ್ತಾ ನನ್ನ ಮಗನಿಗೆ ಇನ್ನೊಬ್ಬಳು ಪತ್ನಿಯಿದ್ದು, ತಾನು ಸತ್ತ ನಂತರ ಆಕೆಯನ್ನು ಸ್ವೀಕರಿಸಬೇಕೆಂದು ಹೇಳಿದಳು. ಸಿರಿನ್ ಮತ್ತು ನನ್ನ ಪತ್ನಿಯ ಅಳುವನ್ನು ನಿಲ್ಲಿಸಲು ನಾನು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮೊಮ್ಮಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಎಲ್ಲವೂ ಸರಿಯಾಗುವುದೆಂದು ಸಿರಿನ್ ಗೆ ಹೇಳಿದೆ. ಕೆಲ ಕ್ಷಣಗಳ ನಂತರ ನಾವು ಆಕೆಯನ್ನು ಕಳೆದುಕೊಂಡೆವು.

ಆಕೆಯಷ್ಟು ನನ್ನನ್ನು ಬೇರೆ ಯಾರೂ ಆರೈಕೆ ಮಾಡಿಲ್ಲ ಆಕೆ ನನಗೆ ಹಾಗೂ ನನ್ನ ಪತ್ನಿಗೆ ನೀಡಿದಷ್ಟು ಸಂತೋಷ ಬೇರೆ ಯಾರೂ ನೀಡಿಲ್ಲ ಎಂದು ನನಗೆ ಆಕೆಯಲ್ಲಿ ಹೇಳಲು ಸಾಧ್ಯವಾಗಲಿಲ್ಲ.

ನನ್ನ ಮೊಮ್ಮಗಳು ಶಿಫಾಳಿಗೆ ಈಗ ಎಂಟು ವರ್ಷ. ತನ್ನ ತಾಯಿಯಂತೆ ಆಕೆ ನನ್ನ ಪತ್ನಿಯ ಆರೈಕೆ ಮಾಡಿ ಶಾಲೆಗೆ ಹೋಗುತ್ತಾಳೆ. ಆಕೆಯ ತಾಯಿ ನನ್ನನ್ನು ಪ್ರೀತಿಸಿದಂತೆ ಆಕೆಯೂ ನನ್ನನ್ನು ಪ್ರೀತಿಸುತ್ತಾಳೆ. ಇಂದು ನನ್ನ ಸೊಸೆಯ ಪುಣ್ಯ ತಿಥಿ. ಈ ದಿನ ನಾನು ಆಕೆಗಾಗಿ ಉಪವಾಸ ಕೈಗೊಂಡು ಅಲ್ಲಾಹನಿಗೆ ಪ್ರಾರ್ಥಿಸುತ್ತಾ ಕಾಲ ಕಳೆಯುತ್ತೇನೆ. ನನ್ನ ಹೃದಯದಿಂದ ಸಿರಿನ್ ಗಾಗಿ ಪ್ರಾರ್ಥಿಸುತ್ತೇನೆ ಹಾಗೂ ಆಕೆಯ ಪುತ್ರಿಯ ಹೃದಯದಿಂದ ಎಲ್ಲಾ ನೋವುಗಳನ್ನೂ ದೂರ ಮಾಡುವಂತೆ ಕೇಳಿಕೊಳ್ಳುತ್ತೇನೆ. ನನ್ನ ಪುತ್ರಿಯ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆಕೆ ಜೀವಂತವಿರುವಾಗ ಆಕೆಯ ನೋವನ್ನು ಶಮನಗೊಳಿಸಲಾಗಲಿಲ್ಲವಲ್ಲ ಹಾಗೂ ಆಕೆ ಎಷ್ಟೊಂದು ವಿಶೇಷವಾಗಿದ್ದಳು ಎಂದು ಹೇಳಿಲ್ಲವೆಂಬ ನೋವು ಸದಾ ನನ್ನನ್ನು ಕಾಡುತ್ತದೆ.

ಹಾರುನ್ (60)

share
ಜಿಎಂಬಿ ಆಕಾಶ್
ಜಿಎಂಬಿ ಆಕಾಶ್
Next Story
X