ಉಳ್ಳಾಲ: 'ಭಾರತ್ ಸ್ಕೌಟ್ಸ್, ಗೈಡ್ಸ್' ವಾರ್ಷಿಕ ಮಹಾಸಭೆ

ಉಳ್ಳಾಲ, ಜು. 3: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯು ಫೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಆಂಗ್ಲ ಮಾಧ್ಯಮ ಶಾಲಾ ಸಭಾ ಭವನದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಜಿ.ಕಜೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಫೆರ್ಮನ್ನೂರು ಚರ್ಚ್‌ನ ಧರ್ಮಗುರುಗಳಾದ ವಂದನೀಯ ರೆ. ಫಾ. ಜೆ.ಬಿ. ಸಲ್ದಾನ ಈ ಸಂದರ್ಭದಲ್ಲಿ ಮಾತನಾಡಿದರು.
ಜಿಲ್ಲಾ ಆಯುಕ್ತ ರಾಮಶೇಷ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ವಾಸುದೇವ ಬೋಳಾರ್, ಸಹ ಜಿಲ್ಲಾ ಆಯುಕ್ತ ಎಂ.ಎಚ್ ಮಲಾರ್, ಸಂಸ್ಥೆಯ ಉಪಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ಅಹಮ್ಮದ್ ಅಬ್ಬಾಸ್, ಸೆಬಾಸ್ಟಿಯನ್ ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ನತಾಲಿಯ ಜಿಲ್ಲಾ ಸ್ಕೌಟ್ ಸಂಘಟಕ ಶ್ರೀ ಭರತ್ ರಾಜ್ ಅವರು ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಮಝೀದ್ ಸಂಸ್ಥೆಯು 2016-17 ನೇ ಸಾಲಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ವರದಿ ವಾಚಿಸಿದರು. ಕೋಶಾಧಿಕಾರಿ ಜಗದೀಶ್ ಶೆಟ್ಟಿ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಇದೇ ಸಂದರ್ಭ ನಿವೃತ್ತ ಶಿಕ್ಷಕಿ ಗಂಗಾಬಾಯಿ ಅವರನ್ನು ಸನ್ಮಾನಿಸಲಾಯತು. ಅಲ್ಲದೇ 2016-17 ನೇ ಸಾಲಿನಲ್ಲಿ ತೃತೀಯ ಸೋಪಾನ, ರಾಜ್ಯ ಪುರಸ್ಕಾರ, ರಾಷ್ಟ್ರಪತಿ ಪುರಸ್ಕಾರ ಪಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಗಳನ್ನು ಪುರಸ್ಕರಿಸಲಾಯಿತು. ಜಿಲ್ಲಾ ಜೊತೆ ಕಾರ್ಯದರ್ಶಿ ಜಯವಂತಿ ಸೋನ್ಸ್ ಅವರು ಸ್ವಾಗತಿಸಿದರು. ಸೆಬಾಸ್ಟಿಯನ್ ಶಾಲೆಯ ಸ್ಕೌಟ್ ಶಿಕ್ಷಕ ಪ್ರವೀಣ್ ವಂದಸಿದರು. ಹರೇಕಳ ಶಾಲೆಯ ಸ್ಕೌಟ್ ಶಿಕ್ಷಕ ತ್ಯಾಗಂ ಹರೆಕಳ ಕಾರ್ಯಕ್ರಮ ನಿರ್ವಹಿಸಿದರು.







