ಜು.30: ಮಸ್ಜಿದ್ ಝೀನತ್ ಭಕ್ಷ್ ಆಡಳಿತ ಸಮಿತಿಗೆ ಚುನಾವಣೆ
ಮಂಗಳೂರು, ಜು.3: ಬಂದರ್‌ನ ಮಸ್ಜಿದ್ ಝೀನತ್ ಭಕ್ಷ್ ಜುಮಾ ಮಸ್ಜಿದ್‌ನ ಆಡಳಿತ ಸಮಿತಿಗೆ ನಗರದ ಬಂದರ್ ಕಂದುಕದ ಬದ್ರಿಯಾ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಜು.30ರಂದು ಚುನಾವಣೆ ನಡೆಯಲಿದೆ.
ರಾಜ್ಯ ವಕ್ಫ್ ಸಂಸ್ಥೆಯು ನಝೀರ್ ಅಹ್ಮದ್ ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಿದ್ದು, ಅವರು ಸೋಮವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ.
ಜು.11ರಿಂದ 18ರವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ಜು.19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜು.20ರಂದು ನಾಮಪತ್ರ ಹಿಂದಕ್ಕೆ ಪಡೆಯಬಹುದು. ಮಸೀದಿಯ ಕಂದಾಯ ವಾರ್ಡ್ 1ರಿಂದ 25ರವರೆಗಿನ ವ್ಯಾಪ್ತಿಯ 18 ವರ್ಷ ಪ್ರಾಯ ತುಂಬಿದ ಮುಸ್ಲಿಂ ಸದಸ್ಯರು ಮತದಾನ ಮಾಡಲು ಅರ್ಹರಾಗಿದ್ದಾರೆ. ಈಗಾಗಲೆ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಉಪ ಚುನಾವಣಾಧಿಕಾರಿ ನಿವೃತ್ತ ಎಸ್ಸೈ ವಿ. ಮುಹಮ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





