ಮದ್ಯದ ಅಮಲಿನಲ್ಲಿ ತಾಯಿಯನ್ನೇ ಹೊಡೆದು ಕೊಂದ ಪುತ್ರ

ಬೆಂಗಳೂರು, ಜು. 3: ಮದ್ಯದ ಅಮಲಿನಲ್ಲಿ ದೊಣ್ಣೆಯಿಂದ ಹೊಡೆದು ಹೆತ್ತ ತಾಯಿಯನ್ನೆ ಕೊಂದಿದ್ದಾನೆ ಎನ್ನಲಾದ ಘಟನೆ ಇಲ್ಲಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೈಯಪ್ಪನಹಳ್ಳಿ ವ್ಯಾಪ್ತಿಯ ಬಂಡೆನಗರದ ನಿವಾಸಿ ಸರಸ್ವತಿ (46) ಮೃತರು ಎಂದು ಗುರುತಿಸಲಾಗಿದ್ದು, ಘಟನೆಯ ಪ್ರಮುಖ ಆರೋಪಿ ಅವರ ಪುತ್ರ ಪ್ರಭಾಕರ್ ಎಂಬಾತನನ್ನು ಬಂಧಿಸಲಾಗಿದೆ.
ಘಟನೆ ವಿವರ: ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಮದ್ಯದ ಅಮಲಿನಲ್ಲಿ ಪ್ರಭಾಕರ್ ಮನೆಗೆ ಬಂದಿದ್ದು, ಮದ್ಯ ಸೇವನೆ ವಿಚಾರವಾಗಿ ತಾಯಿ ಸರಸ್ವತಿ ಜೊತೆ ಜಗಳವಾಗಿದೆ. ಇದರಿಂದ ಕೋಪಗೊಂಡ ಪ್ರಭಾಕರ್ ಮರದ ದೊಣ್ಣೆಯಿಂದ ತಾಯಿಯ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡು ಸರಸ್ವತಿ ಮೃತಪಟ್ಟಿದ್ದಾರೆ. ಪ್ರಕರಣದ ಆರೋಪಿ ಪ್ರಭಾಕರ್‌ನನ್ನು ವಶಕ್ಕೆ ಪಡೆದಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Next Story





