55 ಸರಕಾರಿ ಬಸ್‌ಗಳ ಪರವಾನಿಗೆ ರದ್ದು: ಹೈಕೋರ್ಟ್ ಆದೇಶ ಪಾಲನೆಗೆ ಆಗ್ರಹಿಸಿ ಮನವಿ

ಉಡುಪಿ, ಜು.3: ಉಡುಪಿ ನಗರದಿಂದ ಸಂಚರಿಸುವ 55 ಕೆಎಸ್‌ಆರ್‌ಟಿಸಿ ಬಸ್‌ಗಳ ಪರವಾನಿಗೆ ರದ್ದುಗೊಳಿಸಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದ ನಂತರವೂ ಬಸ್‌ಗಳು ನಿರಾತಂಕವಾಗಿ ಸಂಚಾರ ನಡೆಸುತ್ತಿರುವುದಾಗಿ ಆರೋಪಿಸಿ ಖಾಸಗಿ ಹಾಗೂ ಕೆನರಾ ಬಸ್ ಮಾಲಕರ ಸಂಘದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಪ್ರಾದೇಶಿಕ ಸಾರಿಗೆ ಉಪ ಆಯುಕ್ತರ ಎಚ್.ಗುರುಮೂರ್ತಿ ಕುಲಕರ್ಣಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಸಮಯದ ವೇಳಾಪಟ್ಟಿ ಗೊಂದಲದಿಂದ 55 ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ತಡೆ ನೀಡಿ ನ್ಯಾ.ಎಸ್. ಸುಜಾತ ನೇತೃತ್ವದ ಹೈಕೋರ್ಟ್ ಪೀಠ ಜೂ.22ರಂದು ಆದೇಶ ನೀಡಿದೆ. 1997 ಹಾಗೂ 2007ರ ಕಾಯ್ದೆ ಪ್ರಕಾರ ಎಲ್ಲ ಸರಕಾರಿ ಹಾಗೂ ಖಾಸಗಿ ಬಸ್‌ಗಳಿಗೆ ಒಂದೇ ರೀತಿಯ ಸಮಯದ ಅಂತರವನ್ನು ನಿಗದಿ ಮಾಡಬೇಕು ಎಂದು ತಿಳಿಸಲಾಗಿದೆ. ಆದರೆ ಹೊಸ ನರ್ಮ್ ಬಸ್‌ಗಳ ವೇಳಾಪಟ್ಟಿಯಲ್ಲಿ ಅನೇಕ ವ್ಯತ್ಯಾಸಗಳಿವೆ. ಪ್ರಕರಣ ನ್ಯಾಯಾ ಲಯದಲ್ಲಿ ಇರುವಾಗ ಪರವಾನಿಗೆ ನೀಡಲು ಅವಕಾಶ ಇಲ್ಲ. ಆದುದರಿಂದ ನ್ಯಾಯಾಲಯ ಈ ಆದೇಶ ನೀಡಿದೆ.
ಜೂ.29ರಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಅಧಿಕೃತ ಆದೇಶ ಪತ್ರ ರವಾನೆಯಾಗಿದೆ ಎಂದು ಆರ್‌ಟಿಒ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಆದೇಶ ಪಾಲನೆಗೆ ಮೀನಮೇಷ ಎಣಿಸುತ್ತಿದ್ದಾರೆ. ಖಾಸಗಿ ಬಸ್‌ಗಳ ವಿರುದ್ಧ ಯಾವುದೇ ಆದೇಶ ಬಂದರೂ ತಕ್ಷಣವೇ ಜಾರಿಗೆ ಒತ್ತಡ ಹಾಕುವ ಇವರು ತಮ್ಮ ವಿರುದ್ಧ ಬಂದ ಆದೇಶ ಪಾಲನೆ ಮಾಡಲು ಹಿಂಜರಿಯುತ್ತಿದ್ದಾರೆ. ಈ ರೀತಿಯ ಪಕ್ಷಪಾತ ಧೋರಣೆಯನ್ನು ತೋರಿಸದೆ ಕೂಡಲೇ ಕೆಎಸ್‌ಆರ್‌ಟಿಸಿ ಬಸ್‌ಗಳ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು ಎಂದು ಸಂಘ ಒತ್ತಾಯಿಸಿತು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಈ ಕುರಿತು ಶೀಘ್ರವೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೂ ಸ್ವಲ್ಪಸಮಯ ನೀಡಬೇಕಾಗು ತ್ತದೆ. ಈ ಸಂಬಂಧ ಸಾರಿಗೆ ಆಯುಕ್ತರ ಜತೆ ಮಾತನಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. 55 ನರ್ಮ್ ಬಸ್‌ಗಳ ಪರವಾನಿಗೆ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶ ಪಾಲಿಸುವಂತೆ ಕೆಎಸ್‌ಆರ್‌ಟಿಸಿಗೆ ಸೂಚನೆ ನೀಡ ಲಾಗಿದೆ. ನ್ಯಾಯಾಲಯದ ಆದೇಶ ಧಿಕ್ಕರಿಸಿದರೆ ನ್ಯಾಯಾಂಗ ನಿಂದನೆಗೆ ಗುರಿ ಯಾಗಬೇಕಾಗುತ್ತದೆ ಎಂದು ಪ್ರಭಾರ ಉಪಸಾರಿಗೆ ಆಯುಕ್ತ ಎಚ್.ಗುರು ಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಖಾಸಗಿ ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಉಡುಪಿ ಸಿಟಿ ಬಸ್ ಮಾಲಕರ ಸಂದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಿವರಾಮ ಶೆಟ್ಟಿ, ವಿನಯ ಮೂರ್ತಿ, ಪ್ರವೀಣ್ ಶೆಟ್ಟಿ, ಸುಧಾಕರ ಕಲ್ಮಾಡಿ, ಇಬ್ರಾಹಿಂ ಮನ್ನಾರ್, ಹಮೀದ್, ಅಜಯ್ ರಾವ್, ಕಿರಣ್ ರಾವ್ ಮೊದ ಲಾದವರು ಹಾಜರಿದ್ದರು.
ಹೈಕೋರ್ಟ್ ಆದೇಶದಂತೆ ನರ್ಮ್ ಬಸ್‌ಗಳ ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಸಾರಿಗೆ ಆಯುಕ್ತರಿಗೆ ಮನವಿ ಸಲ್ಲಿಸ ಲಾಗಿದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಇನ್ನೂ ಆದೇಶ ಸಿಕ್ಕಿಲ್ಲ ಎಂದು ಹೇಳುತ್ತಿದ್ದಾರೆ. ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ. ಇದರ ವಿರುದ್ದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ರಾಜ್ಯ ಖಾಸಗಿ ಬಸ್ ಮಾಲಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ್ಷ ರಾಜವರ್ಮ ಬಲ್ಲಾಳ್ ತಿಳಿಸಿದರು.







