ಮನೆಗೆ ನುಗ್ಗಿ ನಗ-ನಗದು ಕಳವು
ಮಂಜೇಶ್ವರ, ಜು. 3: ಇಲ್ಲಿನ ಮನೆಯೊಂದರಿಂದ ಸುಮಾರು 16 ಪವನ್ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಕಳವಾದ ಬಗ್ಗೆ ವರದಿಯಾಗಿದೆ.
ಸೀತಾಂಗೋಳಿ ಸಮೀಪದ ಕಟ್ಟತ್ತಡ್ಕ ಮುಹಿಮ್ಮತ್ ನಗರದ ಅಬ್ದುಲ್ಲ ಕುಂಞಿ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ.
ರವಿವಾರ ರಾತ್ರಿ ಕಳವು ನಡೆದಿದೆಯೆಂದು ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೋಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





