ಅಕ್ರಮ ಮದ್ಯ ಸಾಗಾಟ: ಆರೋಪಿ ಸೆರೆ
ಮಂಜೇಶ್ವರ, ಜು.3: ಐದು ಲೀಟರ್ ವಿದೇಶಿ ಮದ್ಯ ಸಹಿತ ಓರ್ವನನ್ನು ಅಬಕಾರಿದಳ ಬಂಧಿಸಿದೆ.
ನೀರ್ಚಾಲು ಬಳಿಯ ಕುಂಟಿಕಾನ ನಿವಾಸಿ ನಾರಾಯಣ (31) ಎಂಬಾತನನ್ನು ಬಂಧಿಸಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ರವಿವಾರ ಮಧ್ಯಾಹ್ನ ಮುಳ್ಳೇರಿಯದಲ್ಲಿರುವ ಬಿವರೇಜಸ್ ಮದ್ಯದಂಗಡಿಯ ಅಲ್ಪದೂರದಿಂದ ನಾರಾಯಣನನ್ನು ಮದ್ಯ ಸಹಿತ ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





