ಸಮಸ್ತ ರಾಷ್ಟ್ರೀಯ ಮಟ್ಟದ ಮದ್ರಸ ಪ್ರಾರಂಭೋತ್ಸವ ಉದ್ಘಾಟನೆ
ಮಂಗಳೂರು, ಜು.3: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಮಸ್ತ ಶಿಕ್ಷಣ ಮಂಡಳಿಯ ಮದ್ರಸಗಳ 2017-18ನೆ ಸಾಲಿನ ಅಧ್ಯಯನ ವರ್ಷದ ಪ್ರಾರಂಭೋತ್ಸವವು ಜುಲೈ 4ರಿಂದ 11ರ ತನಕ ನಡೆಯಲಿದೆ.
ಇದರ ಉದ್ಘಾಟನಾ ಕಾರ್ಯಕ್ರಮವು ಬೆಂಗರೆ ಅಲ್ ಮದ್ರಸತುದ್ದೀನಿಯ್ಯ ಕೇಂದ್ರ ಮದ್ರಸದಲ್ಲಿ ಜು.4ರಂದು ಬೆಳಗ್ಗೆ 7 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಂಗಳೂರು ಖಾಝಿ ಶೈಖುನಾ ತ್ವಾಖಾ ಉಸ್ತಾದ್, ಸಮಸ್ತ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಶೈಖುನಾ ಖಾಸಿಂ ಉಸ್ತಾದ್, ಜಂಇಯ್ಯತುಲ್ ಉಲಮಾ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಂಬ್ರಾಣ ಅಬ್ದುಲ್ ಖಾದಿರ್ ಅಲ್ ಖಾಸಿಮಿ, ಸದಖತುಲ್ಲಾ ಫೈಝಿ, ಕುಕ್ಕಿಲ ದಾರಿಮಿ, ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ. ಜಿಲ್ಲಾಧ್ಯಕ್ಷ ಕೆ. ಎಲ್. ಉಮರ್ ದಾರಿಮಿ, ಕಾರ್ಯದರ್ಶಿ ಅಬ್ದುಲ್ ಲತೀಫ್ ದಾರಿಮಿ, ಮದ್ರಸ ಮೇನೇಜ್‌ಮೆಂಟ್ ದ.ಕ. ಜಿಲ್ಲಾ ಅಧ್ಯಕ್ಷರು ಐ. ಮೊದಿನಬ್ಬ ಹಾಜಿ, ಕಾರ್ಯದರ್ಶಿ ರಫೀಕ್ ಕೊಡಾಜೆ, ಅಬ್ದುಲ್ಲಾ ರಹ್ಮಾನಿ ಬಾಂಬಿಲ, ಫಾರೂಕ್ ಹನೀಫಿ, ನಾಸರ್ ಕೌಸರಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ನಿರ್ದೇಶಕ ರಫೀಕ್ ಮಾಸ್ಟರ್, ಎ.ಎಂ.ಡಿ. ಅಸೋಸಿಯೇಶನ್‌ನ ಅಧ್ಯಕ್ಷ ಹಮೀದ್ ಹುಸೈನ್, ಉಪಾಧ್ಯಕ್ಷ ಬಿಲಾಲ್ ಮೊದಿನ್, ಕಾರ್ಯದರ್ಶಿ ಹಸನ್ ಬೆಂಗರೆ, ಇಸ್ಮಾಯೀಲ್ ಹಾಜಿ ಬೆಂಗರೆ, ಜಲಾಲುದ್ದೀನ್ ಮೌಲವಿ, ಆಸಿಫ್ ಅಹ್ಮದ್, ಫಯಾಝ್ ಇಬ್ರಾಹೀಂ, ಬಶೀರ್ ಹಾಜಿ, ಸಿ.ಪಿ. ಮುಸ್ತಫಾ, ಅಸ್ಲಂ ಬೆಂಗರೆ, ಹಾಜಿ ಉಮರಬ್ಬ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮುಅಲ್ಲಿಂ ಸ್ಟಾಫ್ ಕೌನ್ಸಿಲ್ ಕಾರ್ಯದರ್ಶಿ ಪಿ.ಎಂ. ಮುಹಮ್ಮದ್ ರಫೀಕ್ ಅಜ್ಜಾವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





