ಕಾಂಗ್ರೆಸ್ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳ ನೇಮಕ
ಮಂಗಳೂರು, ಜು.3: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಜಿಲ್ಲಾ ಸಮಿತಿಗೆ ಕೆಪಿಸಿಸಿ ಸದಸ್ಯರಾಗಿರುವ ಬಿ.ಎ.ಮೊಯ್ದಿನ್ ಬಾವ, ಆರ್.ಕೆ.ಪೃಥ್ವಿರಾಜ್, ವೆಂಕಪ್ಪ ಗೌಡ, ರಾಮಚಂದ್ರ ಗೌಡ, ಪೀತಾಂಬರ ಹೆರಾಜೆ ಅವರನ್ನು ನೇಮಕ ಮಾಡಲಾಗಿದೆ.
ಅಲ್ಲದೆ, ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ಕುಮಾರಿ ಅಪ್ಪಿ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಮಿತಿಗೆ ಅಧ್ಯಕ್ಷರಾಗಿ ಶೇಖರ್ ಕುಕ್ಕೇಡಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ, ಕಚೇರಿ ಉಸ್ತುವಾರಿಯಾಗಿ (ಆಡಳಿತ) ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ನಝೀರ್ ಬಜಾಲ್ ಅವರನ್ನು ನೇಮಕ ಮಾಡಲಾಗಿದೆ.
ಬ್ಲಾಕ್ ಅಧ್ಯಕ್ಷರ ನೇಮಕ: ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾಗಿ ಎನ್.ಶ್ರೀನಿವಾಸ ಕಿಣಿ, ನಗರ ಬ್ಲಾಕ್ ಅಧ್ಯಕ್ಷರಾಗಿ ರಾಜಶೇಖರ ಅಜ್ರಿ, ಕಡಬ ಬ್ಲಾಕ್ ಅಧ್ಯಕ್ಷರಾಗಿ ದಿವಾಕರ ಗೌಡ, ಸುಳ್ಯ ಬ್ಲಾ ಕ್ ಅಧ್ಯಕ್ಷರಾಗಿ ಎನ್.ಜಯಪ್ರಕಾಶ್ ರೈ, ಸುರತ್ಕಲ್ ಬ್ಲಾಕ್ ಅಧ್ಯಕ್ಷರಾಗಿ ಕೇಶವ ಸನಿಲ್, ಗುರುಪುರ ಬ್ಲಾಕ್ ಅಧ್ಯಕ್ಷರಾಗಿ ಸುರೇಂದ್ರ ಬಿ. ಕಂಬಳಿ, ಮಂಗಳೂರು ದಕ್ಷಿಣ ಬ್ಲಾಕ್ ಅಧ್ಯಕ್ಷರಾಗಿ ಅಬ್ದುಲ್ ಸಲೀಂ ಮತ್ತು ಮುಡಿಪು ಬ್ಲಾಕ್ ಅಧ್ಯಕ್ಷರಾಗಿ ಪ್ರಶಾಂತ್ ಕಾಜೇವ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.