ರಕ್ಷಣಾ ಹೆಲಿಕಾಪ್ಟರ್ ಪತನ: 8 ಸಾವು

ಜಕಾರ್ತ, ಜು. 3: ಇಂಡೋನೇಶ್ಯದ ಪ್ರಮುಖ ದ್ವೀಪ ಡೀಂಗ್ ಪ್ಲಾಟೊದಲ್ಲಿರುವ ಜ್ವಾಲಾಮುಖಿಯೊಂದರ ಸಮೀಪದ ನಿವಾಸಿಗಳನ್ನು ತೆರವುಗೊಳಿಸಲು ಧಾವಿಸುತ್ತಿದ್ದ ರಕ್ಷಣಾ ಹೆಲಿಕಾಪ್ಟರೊಂದು ಪತನಗೊಂಡು ಅದರಲ್ಲಿದ್ದ ಎಲ್ಲಾ ಎಂಟು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ದ್ವೀಪ ತಲುಪುವ ಮೂರು ನಿಮಿಷಗಳ ಮೊದಲು ಹೆಲಿಕಾಪ್ಟರ್ ಪತನಗೊಂಡಿತು. ಇಲ್ಲಿ ರವಿವಾರ ಜ್ವಾಲಾಮುಖಿ ಸ್ಫೋಟಿಸಿ ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.
Next Story





