ಹಾಸನಕ್ಕೆ ಹೆಚ್ಚು ಬರುತ್ತಿದ್ದರೆ ರೇವಣ್ಣರಿಗೆ ಸಂತೋಷವಾಗಬಹುದು: ಸಿದ್ದರಾಮಯ್ಯ
.jpg)
ಹಾಸನ, ಜು. 3: ಜಿಲ್ಲೆಯಲ್ಲಿ ರಾಜಕೀಯ ಎಲ್ಲಾ ನನಗೆ ಸ್ಪೆಷಲ್ಲೆ ಆಗಿರುತ್ತದೆ, ಹೆಚ್ಚು ಬಾರಿ ಇಲ್ಲಿಗೆ ಬಂದರೇ ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ಸಂತೋಷವಾದರೂ ಆಗಬಹುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ನಗೆ ಬೀರಿದರು.
ನಗರದ ಸಮೀಪ ಇರುವ ಬೂವನಹಳ್ಳಿ ಎಲೆಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾಜಕೀಯ ಎಂಬುದು ತಿಳಿದ ವಿಚಾರ. ಒಂದುವರೆ ತಿಂಗಳಲ್ಲಿ ನಾಲ್ಕು ಬಾರಿ ಹಾಸನಕ್ಕೆ ಭೇಟಿ ನೀಡಿದರೆ ಅದು ರೇವಣ್ಣನವರು ಸಂತೋಷಪಟ್ಟರು ಪಡಬಹುದು. ಅದಕ್ಕಾಗಿಯೇ ನಗರಕ್ಕೆ ನಾಲ್ಕು ಬಾರಿ ಬಂದು ಹೋಗಿರುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೀತಿ ಆಗಿತ್ತು.
ಮುಂದಿನ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದು ಖಚಿತ ಎಂದು ಹೇಳಿದರು. ಸುಪ್ರಿಂಕೋರ್ಟ್ ಆದೇಶ ಪಾಲನೆ ಹಿನ್ನೆಲೆಯಲ್ಲಿ ನೀರು ಬಿಡಲಾಗುತ್ತಿದೆ. ಎಲ್ಲಾ ನೀರನ್ನು ಬಿಡುತ್ತಿಲ್ಲ. ಇಲ್ಲಿಗೂ ನೀರು ಉಳಿಸಿಕೊಂಡು ಬಿಡಲಾಗುತ್ತಿದೆ. ನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡು ಯಾವಾಗಲೂ ಸುಳ್ಳು ಹೇಳಿಕೊಂಡೆ ಬರುತ್ತಿದೆ. ನಾವು ನೀರು ಬಿಡದೆ ಹೋದರೇ ಅವರು ಮತ್ತೆ ನ್ಯಾಯಾಲಯದ ಮೊರೆ ಹೋಗುತಾರೆ. ನಮಗೆ ತೊಂದರೆ ಮಾಡಿಕೊಂಡು ನೀರು ಬಿಡುವುದಿಲ್ಲ. ಮೇಕೆದಾಟು ವಿಚಾರದಲ್ಲಿ ಅವರಿಗೇನು ನಷ್ಟವಿಲ್ಲ ಎಂದರು.
ಮಳೆ ಬಿತ್ತನೆ ವಿಚಾರವಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಕೆಲ ದಿನ ನೋಡಿಕೊಂಡು ಮೋಡ ಬಿತ್ತನೆ ಕಾರ್ಯ ಆರಂಭಿಸುವುದಾಗಿ ಹೇಳಿದರು. ಇನ್ನು ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಏಕವಚನ ಪದ ಬಳಕೆ ಮಾಡುತ್ತಿರುವುದರ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅಸಮಧಾನ ವ್ಯಕ್ತಪಡಿಸುವುದರ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಎಂ ಅವರು ಮೊದಲು ಯಡಿಯೂರಪ್ಪ ಅವರು ಮೊದಲು ಸಂಸ್ಕಾರ ಕಲಿಯಲು ಹೇಳಿ ಎಂದು ಹೇಳಿಕೆ ಕೊಡುವ ಮೂಲಕ ಟಾಂಗ್ ನೀಡಿದರು.
ಇದೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಶಿವರಾಂ, ಮುಖಂಡ ಹೆಚ್.ಕೆ. ಮಹೇಶ್ ಇತರರು ಪಾಲ್ಗೊಂಡಿದ್ದರು.







