ಪೊಲೀಸ್ ದೂರು ಪ್ರಾಧಿಕಾರ ಪ್ರಾರಂಭ
ಉಡುಪಿ, ಜು.3: ಸರಕಾರದ ಅಧಿಸೂಚನೆಯಂತೆ ಜಿಲ್ಲಾಧಿಕಾರಿ ಅಧ್ಯಕ್ಷ ರಾಗಿರುವ ಉಡುಪಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಕಚೇರಿಯನ್ನು ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಿ ಬ್ಲಾಕ್ ನಲ್ಲಿ ತೆರೆಯಲಾಗಿದೆ.
ಆದುದರಿಂದ ಸಾರ್ವಜನಿಕರಿಗೆ ಉಡುಪಿ ಜಿಲ್ಲೆಯ ಯಾವುದೇ ಪೊಲೀಸ್ ಕಚೇರಿಗಳ ಸಿಬ್ಬಂದಿ, ಅಧಿಕಾರಿಗಳ ಬಗ್ಗೆ ದೂರು ಇದ್ದಲ್ಲಿ, ಪೊಲೀಸ್ ಠಾಣೆ ಗಳಲ್ಲಿ ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಿಸಲು ನಿರಾಕರಿಸಿದಲ್ಲಿ, ವಿಳಂಬ ಮಾಡಿದಲ್ಲಿ ಅಥವಾ ಪ್ರಥಮ ವರ್ತಮಾನ ವರದಿ ದಾಖಲಿಸಲು ನಿರಾಕರಿಸಿದಲ್ಲಿ, ಕಿರುಕುಳ ನೀಡಿದಲ್ಲಿ ಅಧ್ಯಕ್ಷರು, ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ, ಜಿಲ್ಲಾಧಿಕಾರಿ ಕಚೇರಿ, ‘ಸಿ’ ಬ್ಲಾಕ್ ರಜತಾದ್ರಿ ಮಣಿಪಾಲ ಇವರಿಗೆ ಲಿಖಿತವಾಗಿ ದೂರು ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





